ADVERTISEMENT

ರಬಕವಿ ಬನಹಟ್ಟಿ | ಶರಣ ಸಂಪ್ರದಾಯ ಮುಂದುವರೆಸಿ: ಗುರುಸಿದ್ಧೇಶ್ವರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 6:06 IST
Last Updated 5 ಫೆಬ್ರುವರಿ 2026, 6:06 IST
ಬನಹಟ್ಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿಕ್ಕರೇವಣಸಿದ್ಧ ಶರಣರ ಕೃತಿಯನ್ನು ಬೈಲಹೊಂಗಲದ ಮಹಾದೇವ ಸರಸ್ವತಿ ಸ್ವಾಮೀಜಿ ಮತ್ತು ರಬಕವಿಯ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಸ್ವಾಮೀಜಿ ಲೋಕಾರ್ಪಣೆ ಮಾಡಿದರು
ಬನಹಟ್ಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿಕ್ಕರೇವಣಸಿದ್ಧ ಶರಣರ ಕೃತಿಯನ್ನು ಬೈಲಹೊಂಗಲದ ಮಹಾದೇವ ಸರಸ್ವತಿ ಸ್ವಾಮೀಜಿ ಮತ್ತು ರಬಕವಿಯ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಸ್ವಾಮೀಜಿ ಲೋಕಾರ್ಪಣೆ ಮಾಡಿದರು   

ರಬಕವಿ ಬನಹಟ್ಟಿ: ಶಿವಶರಣರು ಹಾಕಿಕೊಟ್ಟ ಶರಣ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗುವುದರ ಜೊತೆಗೆ ಮುಂದಿನ ಪೀಳಿಗೆಗೆ ತಲುಪಿಸುವ ಅಗತ್ಯತೆ ಇದೆ. ಶರಣರು ನಡೆಸಿಕೊಂಡ ಬಂದ ಪ್ರವಚನ ಕಾರ್ಯಕ್ರಮಗಳು ನಮ್ಮ ಸಂಸ್ಕಾರ ಮತ್ತು ಸಂಸ್ಕೃತಿಯ ಪ್ರತೀಕವಾಗಿವೆ ಎಂದು ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಸ್ವಾಮೀಜಿ ನುಡಿದರು.

ಅವರು ಮಂಗಳವಾರ ಇಲ್ಲಿನ ಈಶ್ವರಲಿಂಗ ಮೈದಾನದ ಸಮುದಾಯ ಭವನದಲ್ಲಿ ಸರ್ವಸಮಾಜಗಳ ಸಮನ್ವಯ ಮೂರ್ತಿ ಹಟಗಾರ ಜಗದ್ಗುರು ಚಿಕ್ಕರೇವಣಸಿದ್ಧ ಶರಣರ ಕೃತಿಯ ಲೋಕಾರ್ಪಣೆ ಮತ್ತು ಸಿದ್ಧಾರೂಢ ಮಠದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಿದ್ಧಾರೂಢರು ಬುದ್ಧ, ಮಹಾವೀರ ಮತ್ತು ಬಸವಣ್ಣನವರ ಸಂಗಮವಾಗಿದ್ದರು. ಸಿದ್ಧಾರೂಢರ ಮಠವು ಏಕತ್ವವನ್ನು ಸಾರುವ ಮಠವಾಗಿದೆ. ಸಮಾಜ ಮುಂದುವರೆಯಲು ಹಳೆ ಬೀರು ಮತ್ತು ಹೊಸ ಚಿಗುರಿನ ಅವಶ್ಯಕತೆ ಇದೆ. ಅಂಥ ಕಾರ್ಯವನ್ನು ಶರಣರು ಮಾಡಿದ್ದರು. ಇಂದಿನ ದಿನಗಳಲ್ಲಿ ಪುಸ್ತಕಗಳ ಪ್ರಕಟಣೆ ಹೆಚ್ಚಾಗಿದೆ. ಪ್ರತಿಯೊಬ್ಬರು ಪುಸ್ತಕಗಳನ್ನು ಕೊಂಡು ಓದುವುದರ ಜೊತೆಗೆ ಅಲ್ಲಿಯ ಚಿಂತನೆಗಳನ್ನು  ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ADVERTISEMENT

ಬೈಲಹೊಂಗಲದ ಮಹಾದೇವ ಸರಸ್ವತಿ ಸ್ವಾಮೀಜಿ ಮಾತನಾಡಿ, ಶರಣರ ವಚನಗಳನ್ನು ಮತ್ತು ಶರಣರ ಕುರಿತು ರಚಿಸಲಾಗದ ಗ್ರಂಥಗಳನ್ನು ಓದುವುದರಿಂದ ನೆಮ್ಮದಿ ಸಿಗುತ್ತದೆ ಎಂದು ತಿಳಿಸಿದರು.

ಮೈದರಗಿಯ ಅಭಿನವ ರೇವಣಸಿದ್ಧ ಪಟ್ಟದ್ದೇವರು ಹಿರೇಮಠ, ಗಂಗಾಧರ ಸ್ವಾಮೀಜಿ, ಅಗ್ರಾಣೆಪ್ಪ ಬುದ್ನಿ ಶರಣರು, ವೀರೂಪಾಕ್ಷಪ್ಪ ಕೊಕಟನೂರ, ಸುರೇಶ ಕೋಲಾರ, ಶಂಕರ ಜುಂಜಪ್ಪನವರ, ರಾಜಶೇಖರ ಮಾಲಾಪುರ, ಡಾ. ಪಂಡಿತ ಪಟ್ಟಣ, ಸೋಮನಾಥ ಗೊಂಬಿ, ರಾಜು ಬೀಳಗಿ ಇದ್ದರು.

ಕೃತಿ ಪರಿಚಯ ಹಟಗಾರ ಜಗದ್ಗುರು ಚಿಕ್ಕರೇವಣಸಿದ್ಧ ಶರಣರು ಸಂಪಾದಕರು: ಸುರೇಶ ಕೋಲಾರ ಪ್ರಕಾಶಕರು: ಡಾ. ಫ.ಗು.ಹಳಕಟ್ಟಿ ಅಭಿಮಾನಿ ಬಳಗ ಬನಹಟ್ಟಿ ಬೆಲೆ: ₹150

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.