ADVERTISEMENT

ಹುಬ್ಬಳ್ಳಿ: ವಿಶೇಷ ರೈಲುಗಳ ಕಾರ್ಯಾಚರಣೆಯಿಂದ ₹171.47 ಕೋಟಿ ಆದಾಯ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 0:14 IST
Last Updated 14 ನವೆಂಬರ್ 2025, 0:14 IST
<div class="paragraphs"><p>ರೈಲು</p></div>

ರೈಲು

   

– ಪ್ರಜಾವಾಣಿ ಚಿತ್ರ

ಹುಬ್ಬಳ್ಳಿ: ನೈರುತ್ಯ ರೈಲ್ವೆಯು ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ 355 ವಿಶೇಷ ರೈಲುಗಳ ಕಾರ್ಯಾಚರಣೆ ಮೂಲಕ ಒಟ್ಟು ₹171.47 ಕೋಟಿ ಆದಾಯ ಗಳಿಸಿದೆ.

ADVERTISEMENT

ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ 351 ವಿಶೇಷ ರೈಲುಗಳ ಕಾರ್ಯಾಚರಣೆ ಮೂಲಕ ₹138.83 ಕೋಟಿ ಆದಾಯ ಗಳಿಸಿತ್ತು. ಈ ಬಾರಿ ₹32.64 ಕೋಟಿ (ಶೇ 23ರಷ್ಟು) ಹೆಚ್ಚುವರಿ ಆದಾಯ ದೊರೆತಿದೆ.

ಪ್ರಸಕ್ತ ಸಾಲಿನಲ್ಲಿ 19.55 ಲಕ್ಷ ಪ್ರಯಾಣಿಕರು ವಿಶೇಷ ರೈಲುಗಳಲ್ಲಿ ಸಂಚರಿಸಿದ್ದಾರೆ. 521 ಹೆಚ್ಚುವರಿ ಬೋಗಿಗಳನ್ನು ರೈಲುಗಳಿಗೆ ಜೋಡಿಸಿ, ಒಟ್ಟು 35,524 ಹೆಚ್ಚುವರಿ ಬರ್ತ್‌ಗಳ ಸೇವೆ ಒದಗಿಸಲಾಗಿದೆ. ಜೂನ್ ಮತ್ತು ಅಕ್ಟೋಬರ್‌ನ ಹಬ್ಬದ ಸಂದರ್ಭಗಳಲ್ಲಿ ಅತ್ಯಧಿಕ ಆದಾಯ ದೊರೆತಿದೆ ಎಂದು ಪ್ರಕಟಣೆ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.