ADVERTISEMENT

ಗುಡಗೇರಿ | ಭೋಗ ಸುಖವು ಶಾಶ್ವತವಲ್ಲ: ಮುನಿಶ್ರೀ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 6:18 IST
Last Updated 6 ಫೆಬ್ರುವರಿ 2026, 6:18 IST
ಗುಡಗೇರಿ ಗ್ರಾಮದಲ್ಲಿ ಪಂಚ ಕಲ್ಯಾಣದಲ್ಲಿ ಸಮವಸರಣದಲ್ಲಿ 108 ಶ್ರೀ ಪುಣ್ಯಸಾಗರ ಮುನಿ ಮಹಾರಾಜ ಆಶೀರ್ವಚನ ನೀಡಿದರು
ಗುಡಗೇರಿ ಗ್ರಾಮದಲ್ಲಿ ಪಂಚ ಕಲ್ಯಾಣದಲ್ಲಿ ಸಮವಸರಣದಲ್ಲಿ 108 ಶ್ರೀ ಪುಣ್ಯಸಾಗರ ಮುನಿ ಮಹಾರಾಜ ಆಶೀರ್ವಚನ ನೀಡಿದರು   

ಗುಡಗೇರಿ: ‘ಭೋಗ ಸುಖವು ಶಾಶ್ವತವಲ್ಲ, ಪ್ರತಿಯೊಬ್ಬರು ಆತ್ಮಕಲ್ಯಾಣದ ಕಡೆಗೆ ಸಾಗಬೇಕು’ ಎಂದು 108 ಶ್ರೀ ಪುಣ್ಯಸಾಗರ ಮುನಿ ಮಹಾರಾಜ ಹೇಳಿದರು.

ಗ್ರಾಮದಲ್ಲಿ 1008 ಶ್ರೀ ಶಾಂತಿನಾಥ ತೀರ್ಥಂಕರರ ಪಂಚ ಕಲ್ಯಾಣ ಮಹೋತ್ಸವದ ಅಂಗವಾಗಿ ಗುರುವಾರ ನಡೆದ ಕೇವಲಜ್ಞಾನ ಕಲ್ಯಾಣ ಕಾರ್ಯಕ್ರಮದಲ್ಲಿ ಸಮವಸರಣ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

‘ಇಂದು ಸಣ್ಣ ವಿಚಾರಕ್ಕೂ ವಿರಸ ಮಾಡಿಕೊಂಡು ಪಾಪ ಬಂಧನಕ್ಕೆ ಒಳಗಾಗುತ್ತಿದ್ದು, ಧರ್ಮದ ಮಾರ್ಗದಲ್ಲಿ ಸಾಗಿ ಆತ್ಮಕಲ್ಯಾಣ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

ಶಾಸಕ ಎಂ.ಆರ್. ಪಾಟೀಲ್ ಮಾತನಾಡಿ, ‘ಜೈನ ಸಮುದಾಯದವರು ದುಡಿಮೆಯ ಒಂದು ಭಾಗವನ್ನು ಪರೋಪಕಾರಕ್ಕೆ ನೀಡುತ್ತಿರುವುದು ಎಲ್ಲರಿಗೂ ಮಾದರಿ. ಸಮಾಜದ ಅಭಿವೃದ್ಧಿಗೆ ಸದಾ ನೆರವು ನೀಡಲಾಗುವುದು’ ಎಂದು ಹೇಳಿದರು.

ಸಿಂಹನಗದ್ದೆ ಲಕ್ಷ್ಮೀಸೇನ ಭಟ್ಟಾರಕರಿಂದ ಕೇವಲಜ್ಞಾನ ಕಲ್ಯಾಣ ನಡೆಯಿತು. ಜೈನ ಸಮಾಜದ ಮುಖಂಡ ಸಂಜಯ್ ಪಾಟೀಲ್, ಮಾಜಿ ಶಾಸಕ ಎಂ.ಎಸ್. ಅಕ್ಕಿ, ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಚಂದ್ರಶೇಖರ ಜುಟ್ಟಲ್ ಮಾತನಾಡಿದರು.

ವಕೀಲ ಆರ್.ಎಂ. ಕಮತದ, ಮಾಲತೇಶ ಸಾಗೋಟಿ, ಬಸನಗೌಡ ಕರೆಹೊಳಲಪ್ಪನವರ, ಅಪ್ಪಣ್ಣ ಉಂಡೇಕಾರ ಅವರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.