
ಕುಂದಗೋಳ: ಮಣ್ಣಿನ ಪ್ರತಿ ಕಣದಲ್ಲೂ ಶಂಕರನನ್ನು ಕಂಡವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಎಂದು ಚಿತ್ರದುರ್ಗ ವಿಧಾನ ಪರಿಷತ ಸದಸ್ಯ ಕೆ.ಎಸ್.ನವೀನ ಹೇಳಿದರು.
ಗುರುಕಾರುಣ್ಯ ಪ್ರತಿಷ್ಠಾನ, ಅಟಲ್ ಸಾಹಿತ್ಯ ವೇದಿಕೆಯಿಂದ ವಾಜಪೇಯಿ ಅವರ 101 ಜನ್ಮ ದಿನಾಚರಣೆ ಅಂಗವಾಗಿ ಸದ್ಗಮಯ ಕಾರ್ಯಕ್ರಮದಲ್ಲಿ ಮಾತನಾಡಿದರು.
’ಅಧಿಕಾರ ಇದ್ದಾಗಲೂ, ವಿರೋಧ ಪಕ್ಷದಲ್ಲಿದ್ದಾಗಲೂ ದೇಶ ಸೇವೆ ಮಾಡಬಹುದು ಎಂದು ತೊರಿಸಿಕೊಟ್ಟರು ವಾಜಪೇಯಿ. ವಿರೋದ ಪಕ್ಷದ ನಾಯಕರಾಗಿದ್ದಾಗ ವಿಶ್ವ ಸಂಸ್ಥೆಯಲ್ಲಿ ಪಾಲ್ಗೊಂಡು ಹಿಂದಿಯಲ್ಲಿ ಮಾತನಾಡಿ ದೇಶದ ಗೌರವ ಹೆಚ್ಚಿಸಿದ್ದ‘ ಎಂದರು.
ಸಾಮಾಜಿಕ, ಅಂತ್ಯೋದಯ ಪರಿಕಲ್ಪನೆ, ರಸ್ತೆ ಮಾರ್ಗ ರೂಪರೇಷೆ, ಸರ್ವ ಶಿಕ್ಷಣ ಅಭಿಯಾನ ಮೂಲಕ ಪ್ರತಿ ಹಳ್ಳಿ ಹಳ್ಳಿಗೆ ಶಾಲೆಗಳನ್ನ ಕಲ್ಪಿಸಿದರ ಜೋತೆಗೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಮೂಲಕ ಗ್ರಾಮಗಳ ರಸ್ತೆ ಸುಧಾರಣೆ ಹಾಗೂ ಕಾರ್ಗಿಲ್ ಯುದ್ಧ ಗೆಲ್ಲುವುದಲ್ಲದೇ ನೇರೆ ರಾಷ್ಟ್ರ ಜೋತೆಗ ಸ್ನೇಹ ಹಸ್ತ ಚಾಚಿದ ಸಹದೃಯದ ಮನಸ್ಸಿನ ಅಜಾತಶತ್ರು ಪ್ರಧಾನಿ ಆಗಿದ್ದರು ಎಂದು ಹೇಳಿದರು.
ಶಿರಹಟ್ಟಿಯ ಮಾಜಿ ಶಾಸಕ ಜೆ.ಎಸ್.ಗಡ್ಡದೇವರಮಠ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿ, ವಾಜಪೇಯಿ ಅವರ ಮಾತುಗಳನ್ನು ಕೇಳಿ ಬೆಳೆದಿದ್ದೆವೆ. ಉತ್ತಮ ಮನಸ್ಸಿನ ವ್ಯಕ್ತಿಗಳು ಮಾತ್ರ ಪೂಜ್ಯನಿಯವಾಗುತ್ತಾರೆ’ ಎಂದರು.
ಶಿವಮೊಗ್ಗದ ಕಗ್ಗ ನಟೇಶ ಅವರು ಕಗ್ಗಗಳ ಮೂಲಕ ವಾಜಪೇಯಿ ಅವರ ವ್ಯಕ್ತಿತ್ವ ಹಾಗೂ ಜೀವನದ ಸಾರವನ್ನು ಎಳೆ ಎಳೆಯಾಗಿ ತಿಳಿಸಿದರು.
ಸಮಾಜ ಸೇವೆಕ ರಾಚಯ್ಯ ಹಿರೇಮಠ, ಖಾದಿ ಕಾರ್ಯಕರ್ತ ರಾಘವೇಂದ್ರ ಮುತಾಲಿಕ ದೇಸಾಯಿ, ಕೃಷಿ ಸಾಧಕಿ ರತ್ನಾ ಹೊಸಳ್ಳಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇಂಚಗೇರಿ ಮಠದ ಎ.ಸಿ. ವಾಲಿ ಗುರೂಜಿ ಮಾತನಾಡಿದರು. ಕಲ್ಯಾಣಪುರದ ಬಸವಣ್ಣಜ್ಜನವರು ಪಾಲ್ಗೊಂಡಿದ್ದರು.
ಮಲ್ಲಿಕಾರ್ಜುನ ಬಾಳಿಕಾಯಿ, ಹನಮಂತಗೌಡ್ರ ಪಾಟೀಲ, ಅರ್ಜುನ ನಾಡಗೀರ, ಶಾಮಸುಂದರ ದೇಸಾಯಿ, ನಾಗರಾಜ ಸುಭರಗಟ್ಟಿ ಮತ್ತಿತರಿದ್ದರು. ಸುಶೀಲೆಂದ್ರ ಕುಂದರಗಿ ಹಾಗೂ ಶಶಿಕಾಂತ ರಾಠೋಡ ನಿರೂಪಿಸಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.