
ನವಲಗುಂದ: ‘ಮಕ್ಕಳಲ್ಲಿ ಸಂಸ್ಕಾರ ಮತ್ತು ಸಾಮಾಜಿಕ ಮೌಲ್ಯ ಬೆಳೆಸುವ ಜವಾಬ್ದಾರಿ ಶಿಕ್ಷಕರು ಮತ್ತು ಪೋಷಕರ ಮೇಲಿದೆ’ ಎಂದು ಕೈಗಾರಿಕೆ ಮತ್ತು ಕಾರ್ಖಾನೆಗಳ ಇಲಾಖೆಯ ಜಂಟಿ ನಿರ್ದೇಶಕ ರವೀಂದ್ರನಾಥ ರಾಥೋಡ ಹೇಳಿದರು.
ತಾಲ್ಲೂಕಿನ ಖಣ್ಣೂರ ಗ್ರಾಮದ ಆರ್.ವಿ.ಎಸ್ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಈಚೆಗೆ ಏರ್ಪಡಿಸಿದ್ದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಆರ್.ವಿ.ಎಸ್ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಪ್ರೊ.ಎಸ್.ಕೆ.ಜಂಗಳೆಪ್ಪಗೌಡರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ನಮ್ಮ ಶಾಲೆ ಮೂಲಕ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದರು.
ಪ್ರಾಚಾರ್ಯೆ ಲತಾ ಎಸ್.ಎಸ್., ಶಾಲೆಯ ವಾರ್ಷಿಕ ವರದಿ ಓದಿದರು. ರವೀಂದ್ರನಾಥ್ ರಾಥೋಡ್ ಅವರಿಗೆ ‘ಸುರಕ್ಷಾ ಶ್ರೀ’, ಪ್ರೊ.ಎಂ.ಶಕುಂತಲಾ ಹನುಮಂತಪ್ಪ, ಮುನಿರಾಜು, ಈರಣ್ಣ ನಾಗರಾಳ, ಶಶಿಧರ ಕುಲಕರ್ಣಿ ಹಾಗೂ ವೀರಣ್ಣ ಬೋಳಿಶೆಟ್ಟರ ಅವರಿಗೆ ‘ಶಿಕ್ಷಣ ಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶಾಲೆಯ ಚೇರ್ಮನ್ ಸುರೇಶ್ ಎಸ್.ಅಂಗಡಿ, ಸಂಸ್ಥಾಪಕ ವೇನು ಆರ್., ಉಪ ಪ್ರಾಚಾರ್ಯರಾದ ಫಿರೋಜಾಖಾನಂ, ಸಂಜೀವ್ ಗಲಗಲಿ, ಪರಮೇಶ್ವರ, ನರಸಿಂಹಲು, ವಿಜಯಕುಮಾರ ಭಜಂತ್ರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.