ADVERTISEMENT

ಗದಗ: ಲಕ್ಕುಂಡಿಯಲ್ಲಿ ಚಿನ್ನದ ನಿಧಿ ಪತ್ತೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 3:22 IST
Last Updated 11 ಜನವರಿ 2026, 3:22 IST
ಲಕ್ಕುಂಡಿಯಲ್ಲಿ ದೊರೆತ ಚಿನ್ನಾಭರಣ 
ಲಕ್ಕುಂಡಿಯಲ್ಲಿ ದೊರೆತ ಚಿನ್ನಾಭರಣ    

ಗದಗ: ತಾಲ್ಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಗಂಗವ್ವ ಬಸವರಾಜ ರಿತ್ತಿ ಎಂಬುವರು ಮನೆ ಕಟ್ಟಿಸಲು ಅಡಿಪಾಯ ತೆಗೆಯುವ ವೇಳೆ ಶನಿವಾರ ಚಿನ್ನದ ನಿಧಿ ಸಿಕ್ಕಿದೆ.

ತಾಮ್ರದ ಪುಟ್ಟ ಬಿಂದಿಗೆಯಲ್ಲಿ ಅರ್ಧ ಕೆ.ಜಿ.ಗೂ ಹೆಚ್ಚಿನ ತೂಕದ ಚಿನ್ನಾಭರಣ ಸಿಕ್ಕಿದೆ ಎಂದು ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ತಿಳಿಸಿದ್ದಾರೆ.

‘ಸರ, ಉಂಗುರ, ಕಡಗ ಸೇರಿದಂತೆ ಪ್ರಾಚೀನ ವಿನ್ಯಾಸ ಹೊಂದಿರುವ ಆಭರಣಗಳಿವೆ. ತಜ್ಞರು ಅಧ್ಯಯನ ನಡೆಸಿದ ನಂತರ ಚಿನ್ನಾಭರಣ ಯಾರ ಕಾಲದ್ದು ಎಂಬುದು ಗೊತ್ತಾಗಲಿದೆ’ ಎಂದು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.