
ಪ್ರಜಾವಾಣಿ ವಾರ್ತೆ
ಕಡತ
(ಸಾಂದರ್ಭಿಕ ಚಿತ್ರ)
ಗದಗ: ತಾಲ್ಲೂಕಿನ ಬಿಂಕದಕಟ್ಟಿ ಮೃಗಾಲಯದಲ್ಲಿ ಮೃತಪಟ್ಟಿದ್ದ ನೀಲ್‌ಗಾಯ್ ಪ್ರಾಣಿ ಸಾವಿಗೆ ಗಳಲೆ ರೋಗ (ಹೆಮರಾಜಿಕ್ ಸೆಪ್ಟಿಸೆಮಿಯಾ) ಕಾರಣ ಎಂಬುದು ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿದೆ.
‘ನೀಲ್‌ಗಾಯ್ ಸಾವಿನ ಕಾರಣ ತುರ್ತು ಆರೋಗ್ಯ ಸಲಹಾ ಸಮಿತಿ ಸಭೆ ನಡೆಸಲಾಗಿದೆ. ಈ ರೋಗ ವೇಗವಾಗಿ ಹರಡುವ ಕಾರಣ ಮುನ್ನೆಚ್ಚರಿಕೆ ವಹಿಸಿದೆ’ ಎಂದು ಮೃಗಾಲಯದ ಆರ್‌ಎಫ್‌ಒ ಸ್ನೇಹಾ ಕೊಪ್ಪಳ ತಿಳಿಸಿದ್ದಾರೆ.
‘ತಜ್ಞರ ಸಲಹೆಯಂತೆ ಚುಕ್ಕೆ ಜಿಂಕೆ, ಕಡವೆ, ಕೃಷ್ಣಮೃಗ ಮತ್ತು ನೀಲ್‌ಗಾಯ್ ಪ್ರಾಣಿಗಳ ವಿಭಾಗಕ್ಕೆ ಜನರಿಗೆ ಒಂದು ವಾರ ಪ್ರವೇಶ ನಿರ್ಬಂಧಿಸಲಾಗಿದೆ. ಸದ್ಯ ಆತಂಕದ ಸ್ಥಿತಿ ಇಲ್ಲ’ ಎಂದು ತಿಳಿಸಿದರು.
ಮೂರೂವರೆ ವರ್ಷದ ನೀಲ್‌ಗಾಯ್ ಫೆ.3ರಂದು ಮೃತಪಟ್ಟಿತ್ತು. ಶವಪರೀಕ್ಷೆ ವರದಿ ಫೆ.7ರಂದು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.