ADVERTISEMENT

ಶೈಕ್ಷಣಿಕ ಪ್ರವಾಸ: ಮುಂಡರಗಿ ವಿದ್ಯಾರ್ಥಿಗಳಿಂದ ವಿಧಾನ ಸೌಧ ವೀಕ್ಷಣೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 5:20 IST
Last Updated 7 ಡಿಸೆಂಬರ್ 2025, 5:20 IST
<div class="paragraphs"><p>ಮುಂಡರಗಿಯ ಜಗದ್ಗುರು ತೋಂಟದಾರ್ಯ ಕೋಟೆ ಪ್ರೌಢ ಶಾಲೆಯ ವಿದ್ಯಾರ್ಥಿಗಳು ವಿಧಾನ ಸೌಧದ ಸಭಾಪತಿಗಳ ಕಾರ್ಯಾಲಯದಲ್ಲಿ ಬಸವರಾಜ ಹೊರಟ್ಟಿ ಅವರೊಂದಿಗೆ ಪೋಟೊ ತಗೆಯಿಸಿಕೊಂಡರು. ಜಯಮಾಲಾ ಅವರು ಜತೆಗಿದ್ದರು</p></div>

ಮುಂಡರಗಿಯ ಜಗದ್ಗುರು ತೋಂಟದಾರ್ಯ ಕೋಟೆ ಪ್ರೌಢ ಶಾಲೆಯ ವಿದ್ಯಾರ್ಥಿಗಳು ವಿಧಾನ ಸೌಧದ ಸಭಾಪತಿಗಳ ಕಾರ್ಯಾಲಯದಲ್ಲಿ ಬಸವರಾಜ ಹೊರಟ್ಟಿ ಅವರೊಂದಿಗೆ ಪೋಟೊ ತಗೆಯಿಸಿಕೊಂಡರು. ಜಯಮಾಲಾ ಅವರು ಜತೆಗಿದ್ದರು

   

ಮುಂಡರಗಿ: ಶೈಕ್ಷಣಿಕ ಪ್ರವಾಸದ ಅಂಗವಾಗಿ ಇಲ್ಲಿಯ ಜಗದ್ಗುರು ತೋಂಟದಾರ್ಯ ಕೋಟೆ ಪ್ರೌಢಶಾಲೆಯ ವಿದ್ಯಾರ್ಥಿಗಳು ಶುಕ್ರವಾರ ಬೆಂಗಳೂರಿನ ವಿಧಾನ ಸೌಧಕ್ಕೆ ಭೇಟಿ ನೀಡಿದರು.

ಸಭಾಪತಿ ಬಸವರಾಜ ಹೊರಟ್ಟಿ ಅವರು ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿಯನ್ನು ತಮ್ಮ ಕಚೇರಿಗೆ (ಸಭಾಪತಿಗಳ ಕಾರ್ಯಾಲಯ) ಕರೆಯಿಸಿಕೊಂಡು ಮಕ್ಕಳೊಂದಿಗೆ ಕೆಲಕಾಲ ಸಂವಾದ ನಡೆಸಿದರು. ಮಕ್ಕಳು ಹಾಗೂ ಸಿಬ್ಬಂದಿಯೊಂದಿಗೆ ಪೋಟೊ ತಗೆಯಿಸಿಕೊಂಡರು.

ADVERTISEMENT

ವಿಧಾನ ಸೌಧದಲ್ಲಿದ್ದ ಜಯಮಾಲಾ ಅವರನ್ನು ಕರೆಯಿಸಿ ಮಕ್ಕಳಿಗೆ ಪರಿಚಯಿಸಿದರು. ‘ಒಂಭತ್ತನೇ ತರಗತಿಯಲ್ಲಿರುವ ಪಂಡರಿಬಾಯಿ ಪಾಠವನ್ನು ಯಾರು ಓದಿದ್ದೀರಾ?’ ಎಂದು ಜಯಮಾಲಾ ಅವರು ವಿದ್ಯಾರ್ಥಿಗಳನ್ನು ಪ್ರಶ್ನಿಸಿದರು. ಎಲ್ಲರೂ ಓದಿದ್ದೇವೆ ಎಂದು ವಿದ್ಯಾರ್ಥಿಗಳು ಉತ್ತರಿಸಿದರು. ‘ಅದನ್ನು ಬರೆದವರಾರು?’ ಎಂದು ಜಯಮಾಲಾ ಪುನಃ ವಿದ್ಯಾರ್ಥಿಗಳನ್ನು ಪ್ರಶ್ನಿಸಿದರು. ‘ತಾವೇ....’ ಎಂದು ವಿದ್ಯಾರ್ಥಿಗಳು ಒಕ್ಕೊರಲಿನಿಂದ ಉತ್ತರಿಸಿದರು. ‘ನೀವು ಸಾಹಿತ್ಯ ರಚಿಸುವ ವಿಷಯ ನನಗೆ ಗೊತ್ತೇ ಇಲ್ಲ’ ಎಂದು ಹೊರಟ್ಟಿ ಅವರು ಜಯಮಾಲಾ ಅವರಿಗೆ ಹಸ್ತಲಾಘವ ನೀಡಿ, ಮಕ್ಕಳ ಬೆನ್ನು ಚಪ್ಪರಿಸಿದರು.

ನಂತರ ಹೊರಟ್ಟಿ ಅವರು ವಿಧಾನ ಸೌಧದ ಸಿಬ್ಬಂದಿಯನ್ನು ಕರೆಯಿಸಿಕೊಂಡು ವಿದ್ಯಾರ್ಥಿಗಳಿಗೆ ಹಾಗೂ ಶಾಲಾ ಸಿಬ್ಬಂದಿಗೆ ವಿಧಾನ ಸೌಧ ವೀಕ್ಷಣೆಗೆ ವ್ಯವಸ್ಥೆ ಮಾಡಬೇಕೆಂದು ಸೂಚಿಸಿದರು.

ಸುಮಾರು ಒಂದು ಗಂಟೆ ಕಾಲ ಮಕ್ಕಳು ವಿಧಾನ ಸೌಧವನ್ನು ವೀಕ್ಷಿಸಿದರು.

ಮುಖ್ಯಶಿಕ್ಷಕ ಮಂಜುನಾಥ ತೆಗ್ಗಿನಮನಿ ಶಿಕ್ಷಕರಾದ ಆರ್.ವಿ.ಆರ್ಕಸಾಲಿ, ಬಸವರಾಜ ಕುರಿ, ಪ್ರದೀಪ ನಾಯಕ, ಸುಧಾ ಹಾಲನಗೌಡರ, ವೀರೇಶ ಕುರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.