ADVERTISEMENT

ನರಗುಂದ: ಹಿಂದೂ-ಮುಸ್ಲಿಂ ಭಾವೈಕ್ಯದ ಮೊಹರಂ

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 3:54 IST
Last Updated 7 ಜುಲೈ 2025, 3:54 IST
ನರಗುಂದ ತಾಲ್ಲೂಕಿನ ಕೊಣ್ಣೂರಿನಲ್ಲಿ ಸಂಭ್ರಮದಿಂದ ಮೊಹರಂ ಆಚರಿಸಲಾಯಿತು
ನರಗುಂದ ತಾಲ್ಲೂಕಿನ ಕೊಣ್ಣೂರಿನಲ್ಲಿ ಸಂಭ್ರಮದಿಂದ ಮೊಹರಂ ಆಚರಿಸಲಾಯಿತು   

ನರಗುಂದ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಮೊಹರಂ ಹಬ್ಬವನ್ನು ಭಾನುವಾರ ಹಿಂದೂ-ಮುಸ್ಲಿಮರು ಸಂಭ್ರಮದಿಂದ ಆಚರಿಸಿದರು. ಪಟ್ಟಣದಲ್ಲಿ ಅಲೈದೇವರು ಹಾಗೂ ಪಂಜಾಗಳ ಮೆರವಣಿಗೆ ಮೂಲಕ ಗಾಂಧಿ ವೃತ್ತದಲ್ಲಿ ಸಮಾಗಮಗೊಂಡು ಐಕ್ಯತೆ ಮೆರೆದವು.

ದಂಡಾಪುರ ಓಣಿಯ ಆನೆಯ ಪ್ರತಿರೂಪ ವಾದ್ಯಮೇಳದೊಂದಿಗೆ ಗಮನ ಸೆಳೆಯಿತು. ಎಲ್ಲೆಡೆ ಹೆಜ್ಜೆ ಮೇಳ, ಹೂವಿನ ಕುಣಿತ ಆಕರ್ಷಕವಾಗಿ ಕಂಡು ಬಂದವು. ಹೊರಕೇರಿ, ಜಮಲಾಪುರ, ಸೋಮಾಪುರ ಅರ್ಭಾಣ, ಕಸಬಾ ಓಣಿಯ ಪಂಜಾಗಳಿಗೆ ಭಕ್ತರು ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಿದರು.

ಕೊಣ್ಣೂರಲ್ಲಿ ಸಂಭ್ರಮ: ತಾಲ್ಲೂಕಿನ ಕೊಣ್ಣೂರಿನಲ್ಲಿ ಹಿಂದೂ-ಮುಸ್ಲಿಮರು ಮೊಹರಂ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಿದರು. ಗ್ರಾಮದ ವಿವಿಧ ಮಸೀದಿಗಳ ಅಲೈ ದೇವರುಗಳು ಬಂಕನಾಥೇಶ್ವರ ದೇವಸ್ಥಾನದ ಬಳಿ ಸಮಾಗಮಗೊಂಡು ಗಮನಸೆಳೆದವು. ಮುಳ್ಳು ಹೆಜ್ಜೆ ಕುಣಿತವನ್ನು ನೋಡಲು ಸುತ್ತಲಿನ ಗ್ರಾಮಗಳಿಂದ ಜನರು ಆಗಮಿಸಿದ್ದರು.

ADVERTISEMENT
ನರಗುಂದದಲ್ಲಿ ಮೊಹರಂ ಹಬ್ಬದ ಅಂಗವಾಗಿ ಕಸಬಾ ಚವಡಿಯಲ್ಲಿ ಅಲೈದೇವರುಗಳ ಪಂಜಾ ಪ್ರತಿಷ್ಠಾಪಿಸಲಾದ ದೃಶ್ಯ
ನರಗುಂದದಲ್ಲಿ ಸಂಭ್ರಮದಿಂದ ಮೊಹರಂ ಆಚರಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.