ADVERTISEMENT

ಗದಗ | ಬಡ್ಡಿ ವ್ಯವಹಾರ: ಮನೆ ಮೇಲೆ ದಾಳಿ, ₹26.50 ಲಕ್ಷ ನಗದು ವಶ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2025, 3:32 IST
Last Updated 10 ಫೆಬ್ರುವರಿ 2025, 3:32 IST
<div class="paragraphs"><p>ನಗದು ವಶ</p></div>

ನಗದು ವಶ

   

(ಪಿಟಿಐ ಸಂಗ್ರಹ ಚಿತ್ರ)

ಗದಗ: ಅವಳಿ ನಗರದಲ್ಲಿ ಅಕ್ರಮವಾಗಿ ಬಡ್ಡಿ ದಂಧೆ ನಡೆಸುತ್ತಿದ್ದ ವ್ಯಕ್ತಿಗಳ ಮನೆ ಮೇಲೆ ದಾಳಿ ನಡೆಸಿರುವ ಪೊಲೀಸರು ಹಣ, ಖಾಲಿ ಚೆಕ್‌, ಖಾಲಿ ಬಾಂಡ್‌, ಹಣ ಎಣಿಸುವ ಯಂತ್ರಗಳು ಹಾಗೂ ಆರು ಮಂದಿ ರೌಡಿಶೀಟರ್‌ಗಳು ಸೇರಿದಂತೆ ಒಟ್ಟು 11 ಮಂದಿಯನ್ನು ಭಾನುವಾರ ವಶಕ್ಕೆ ಪಡೆದಿದ್ದಾರೆ.

ADVERTISEMENT

ಗದಗ ಶಹರ ಪೊಲೀಸ್‌ ಠಾಣೆ, ಬೆಟಗೇರಿ ಪೊಲೀಸ್‌ ಠಾಣೆ ಹಾಗೂ ಬೆಟಗೇರಿ ಬಡಾವಣೆ ಪೊಲೀಸರು ಅವಳಿ ನಗರದಲ್ಲಿ ಏಕಕಾಲಕ್ಕೆ 12 ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ₹26.50 ಲಕ್ಷ ಹಣ ಪತ್ತೆಯಾಗಿದೆ.

‘ಅವಳಿ ನಗರದಲ್ಲಿ ಕೆಲವು ವ್ಯಕ್ತಿಗಳು ಸಾಲ ಕೊಟ್ಟು ವಸೂಲಿ ನೆಪದಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂಬ ದೂರುಗಳು ಬಂದಿದ್ದವು. ಈ ಹಿನ್ನಲೆಯಲ್ಲಿ ಭಾನುವಾರ 12 ಕಡೆಗಳಲ್ಲಿ ದಾಳಿ ನಡೆಸಿ, ಪರಿಶೀಲಿಸಿದ್ದೇವೆ. ಕೆಲವು ವ್ಯಕ್ತಿಗಳ ಬಳಿ ದಾಖಲೆ ಇಲ್ಲದ ಹಣ, ಖಾಲಿ ಚೆಕ್‌ಗಳು, ಖಾಲಿ ಚೆಕ್‌ಗಳು, ರಿಜಿಸ್ಟರ್‌ಗಳು ಸಿಕ್ಕಿವೆ. ಅವುಗಳನ್ನು ವಶಪಡಿಸಿಕೊಂಡು ಮುಂದಿನ ಕಾನೂನು ಪ್ರಕ್ರಿಯೆ ಕೈಗೊಳ್ಳಲಾಗುವುದು’ ಎಂದು ಗದಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಸ್‌.ನೇಮಗೌಡ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.