
ಪ್ರಜಾವಾಣಿ ವಾರ್ತೆಗದಗ ತಾಲ್ಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಮನೆ ಅಡಿಪಾಯ ತೆಗೆಯುವ ವೇಳೆ ಸಿಕ್ಕ 466 ಗ್ರಾಂ ತೂಕದ ಚಿನ್ನಾಭರಣ ಪ್ರಕರಣ ದಿನಕ್ಕೊಂದು ಸ್ವರೂಪ ಪಡೆಯುತ್ತಿದೆ. ಮೊದಲು ‘ಇವು ನಿಧಿ ಅಲ್ಲ, ಮನೆಯವರು ಮರೆಮಾಚಿ ಇಟ್ಟ ಆಭರಣಗಳು’ ಎಂದು ಹೇಳಿದ್ದ ಪುರಾತತ್ವ ಇಲಾಖೆಯ ಅಧಿಕಾರಿ, ಎರಡು ದಿನಗಳ ಬಳಿಕ ಹೇಳಿಕೆ ಬದಲಿಸಿದ್ದಾರೆ. ಇದು ನಿಜಕ್ಕೂ ಪುರಾತನ ನಿಧಿಯೇ? ಅಥವಾ ಮುತ್ತಜ್ಜರ ಕಾಲದ ಖಾಸಗಿ ಆಭರಣಗಳೇ? ಎಂಬ ಪ್ರಶ್ನೆಯ ಜೊತೆಗೆ, ಸರ್ಕಾರದ ಕ್ರಮಗಳು, ಜಿಲ್ಲಾಡಳಿತದ ನಿಲುವು ಮತ್ತು ಕುಟುಂಬದ ಗೊಂದಲ… ಹೀಗೆ ಲಕ್ಕುಂಡಿ ಚಿನ್ನದ ನಿಧಿ ಪ್ರಕರಣದ ಸಂಪೂರ್ಣ ವಿಶ್ಲೇಷಣೆ ಈ ವಿಡಿಯೊದಲ್ಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.