ಲಕ್ಷ್ಮೇಶ್ವರ: ತಾಲ್ಲೂಕಿನ ಹುಲ್ಲೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಂಗಳವಾರ ತಾಲ್ಲೂಕು ಮಟ್ಟದ ವಿಜ್ಞಾನಗೋಷ್ಠಿ ಹಾಗೂ ವಿಜ್ಞಾನ ನಾಟಕಗಳ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.
ಬಿಇಒ ಎಚ್.ಎನ್. ನಾಯಕ ಕಾರ್ಯಕ್ರಮ ಉದ್ಘಾಟಿಸಿ ‘ಸುಜ್ಞಾನದ ಅಡಿಯಲ್ಲಿ ವಿಜ್ಞಾನದ ಕಲಿಕೆ ನಡೆಯಬೇಕು. ವಿಜ್ಞಾನದಿಂದ ಪರಿಪೂರ್ಣ ವ್ಯಕ್ತಿತ್ವ, ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ’ ಎಂದರು.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪನ್ಯಾಸಕ ಜಿ.ಡಿ. ದಾಸರ ಮಾತನಾಡಿ, ‘ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಿಜ್ಞಾನದ ವಿಷಯಯದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆ ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿದೆ’ ಎಂದರು.
ಅಧ್ಯಕ್ಷತೆ ವಹಿಸಿದ ಮುಖ್ಯ ಶಿಕ್ಷಕ ಕೆ.ವೈ. ಮೇಲಿನಮನಿ ಮಾತನಾಡಿ, ‘ಸಮುದಾಯದ ಸಹಭಾಗಿತ್ವದಿಂದ ಶೈಕ್ಷಣಿಕ ಪ್ರಗತಿ ಸಾಧ್ಯ ಎಂಬುದಕ್ಕೆ ಹುಲ್ಲೂರು ಗ್ರಾಮ ಉತ್ತಮ ಮಾದರಿ’ ಎಂದರು.
ನೋಡಲ್ ಬಿಆರ್‌ಪಿ ಈಶ್ವರ ಮೆಡ್ಲೇರಿ ‘ವೈಜ್ಞಾನಿಕ ಮನೋಭಾವ ಹೆಚ್ಚಿಸುವ ದೃಷ್ಟಿಯಿಂದ ವಿಜ್ಞಾನ ವಿಚಾರಗೋಷ್ಠಿ ಹಾಗೂ ವಿಜ್ಞಾನ ನಾಟಕ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಪ್ರತಿವರ್ಷ ತಾಲ್ಲೂಕಿನಿಂದ ಆಯ್ಕೆಯಾಗುವ ತಂಡಗಳು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ’ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಪರಮೇಶ್ವರಗೌಡ ಪಾಟೀಲ, ಮಾಜಿ ಉಪಾಧ್ಯಕ್ಷ ಮಾಬೂಲಿ ಗಾಡಗೋಳಿ ಮಾತನಾಡಿದರು. ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಘಟಕ ಅಧ್ಯಕ್ಷ ರಮೇಶ ರಿತ್ತಿ, ಯಲ್ಲಪ್ಪ ನರಸೋಜಿ, ಶೇಖಣ್ಣ ಸಾಸಲವಾಡ, ಎಸ್‍ಡಿಎಂಸಿ ಅಧ್ಯಕ್ಷ ಶಂಕ್ರಣ್ಣ ಮಾಗಡಿ, ಅಶೋಕ ಹಾವೇರಿ, ಶಂಕ್ರಣ್ಣ ಮೂಕಿ, ಆನಂದ ಮುಳಗುಂದ, ಶಿಕ್ಷಣ ಸಂಯೋಜಕ ಉಮೇಶ ಹುಚ್ಚಯ್ಯನಮಠ, ಮುಖ್ಯ ಶಿಕ್ಷಕ ಹರೀಶ ಎಸ್., ಈರಣ್ಣ ಗಾಣಿಗೇರ, ಶೇಖರ ಚಿಕ್ಕಣ್ಣವರ, ಹರೀಶ ಎಸ್, ನವೀನ ಅಂಗಡಿ ಇದ್ದರು.
ವಿಜ್ಞಾನ ಗೋಷ್ಠಿ ಸ್ಪರ್ಧೆ ಫಲಿತಾಂಶ: ವಿದ್ಯಾಪೀಠ ಪಾಠಶಾಲೆಯ ಶ್ರಾವ್ಯ ಹಿರೇಮಠ ಪ್ರಥಮ, ಶಿರಹಟ್ಟಿ ಸಿಸಿಎನ್ ಸರ್ಕಾರಿ ಪ್ರೌಢಶಾಲೆ ರೇಣುಕಾ ಮುಶಪ್ಪನವರ ದ್ವಿತೀಯ, ಬೆಳ್ಳಟ್ಟಿ ಕೆಪಿಎಸ್ ಪ್ರೌಢಶಾಲೆಯ ವೀಣಾ ವಡ್ಡಟ್ಟಿ ತೃತೀಯ ಸ್ಥಾನ ಗಳಿಸಿದ್ದಾರೆ.
ವಿಜ್ಞಾನ ನಾಟಕ ಸ್ಪರ್ಧೆ: ಲಿಟಲ್ ಹಾಟ್ರ್ಸ್ ಇಂಟನ್ರ್ಯಾಷನಲ್ ಶಾಲೆಯ ಪ್ರಿಯಾಂಕ ಗುಡಗುಂಟಿ ಹಾಗೂ ಸಂಗಡಿಗರು ಪ್ರಥಮ, ಕೆಪಿಎಸ್ ಬೆಳ್ಳಟ್ಟಿ ಶಾಲೆಯ ರೀತು ಭರಮರಡ್ಡಿ ಸಂಗಡಿಗರು ದ್ವಿತೀಯ, ಶಿರಹಟ್ಟಿ ಸಿಸಿಎನ್ ಸರ್ಕಾರಿ ಪ್ರೌಢಶಾಲೆಯ ಸಿಂಚನಾ ಸಂಗಡಿಗರು ತೃತೀಯ ಸ್ಥಾನ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.