ADVERTISEMENT

ಮನಮೋಹನ ಸಿಂಗ್ ಅವರಿಗೆ ಹುಬ್ಬಳ್ಳಿಯೊಂದಿಗೆ ಹತ್ತಿರದ ನಂಟಿತ್ತು: ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2024, 16:07 IST
Last Updated 27 ಡಿಸೆಂಬರ್ 2024, 16:07 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಗದಗ: ‘ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ಹುಬ್ಬಳ್ಳಿಯೊಂದಿಗೆ ಹತ್ತಿರದ ನಂಟಿತ್ತು. ಅವರ ಕೋ– ಬ್ರದರ್ ಹಾಗೂ ಅವರ ಪತ್ನಿಯ ಸಹೋದರಿ ಹುಬ್ಬಳ್ಳಿಯಲ್ಲಿ ಇರುವುದು ವಿಶೇಷ. ನಾವು ಅವರನ್ನು ಭೇಟಿಯಾದಾಗಲೆಲ್ಲ  ಹುಬ್ಬಳ್ಳಿಯ ಬಗ್ಗೆ ವಿಶೇಷ ಪ್ರೀತಿ, ಕಾಳಜಿ ವ್ಯಕ್ತಪಡಿಸುತ್ತಿದ್ದರು’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

‘ಮನಮೋಹನ್ ಸಿಂಗ್ ಅವರು ಅಪರೂಪದ ರಾಜಕಾರಣಿ. ದೂರದೃಷ್ಟಿ ಉಳ್ಳವರಾಗಿದ್ದರು. ದೇಶವನ್ನು ಆರ್ಥಿಕ ಸಂಕಷ್ಟದಿಂದ ದೂರ ಮಾಡಿದವರು. ಆರ್‌ಬಿಐ ಗವರ್ನರ್ ಆಗಿ, ವಿಶ್ವಬ್ಯಾಂಕ್‌ನ ಭಾರತದ ಪ್ರತಿನಿಧಿಯಾಗಿ ಭಾರತ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಅವರು ಸಂಪೂರ್ಣ ಜೀವನ ಮೀಸಲಿಟ್ಟಿದ್ದು, ಅದರ ಪರಿಣಾಮ ಭಾರತ ಸಧೃಡ್ಡ ಆರ್ಥಿಕ ಸ್ಥಿತಿಯಲ್ಲಿದೆ’ ಎಂದು ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

‘ಬೆಂಗಳೂರಿನ ಅಭಿವೃದ್ಧಿ ಬಗ್ಗೆಯೂ ಮನಮೋಹನ್ ಸಿಂಗ್ ಅವರಿಗೆ ವಿಶೇಷ ಕಾಳಜಿ ಇತ್ತು. ಬೆಂಗಳೂರು ಮೆಟ್ರೋ ಯೋಜನೆಗೆ ₹5 ಸಾವಿರ ಕೋಟಿ ನೀಡಿರುವುದನ್ನು ಸ್ಮರಿಸುತ್ತೇನೆ. ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಬಹಳಷ್ಟಿದೆ. ಅವರ ಮಾರ್ಗದರ್ಶನ ಬಹಳ ಅವಶ್ಯವಿತ್ತು. ಅವರ ಅಗಲಿಕೆಯಿಂದ ದೇಶಕ್ಕೆ ದೊಡ್ಡ ನಷ್ಟವಾಗಿದೆ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.