ADVERTISEMENT

ನರಗುಂದ | ಸಾವಿತ್ರಿಬಾಯಿ ಫುಲೆ ಶಿಕ್ಷಣ ಸೇವೆ ಶ್ಲಾಘನೀಯ: ಶಾಂತಲಿಂಗ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 2:20 IST
Last Updated 6 ಜನವರಿ 2026, 2:20 IST
ನರಗುಂದ ತಾಲ್ಲೂಕಿನ ಭೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ವೈ.ಎಂ. ಭಜಂತ್ರಿ ದಂಪತಿಗಳಿಗೆ ಸನ್ಮಾನಿಸಲಾಯಿತು 
ನರಗುಂದ ತಾಲ್ಲೂಕಿನ ಭೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ವೈ.ಎಂ. ಭಜಂತ್ರಿ ದಂಪತಿಗಳಿಗೆ ಸನ್ಮಾನಿಸಲಾಯಿತು    

ನರಗುಂದ: ‘ಸಾವಿತ್ರಿಬಾಯಿ ಫುಲೆ ಅವರು ದೇಶಕ್ಕೆ ಸಲ್ಲಿಸಿದ ಶಿಕ್ಷಣ ಸೇವೆ ಶ್ಲಾಘನೀಯ. ಇಂಥಹ ಸಂದರ್ಭದಲ್ಲಿ ವೈ.ಎಂ. ಭಜಂತ್ರಿ ಅವರ ಅಭಿನಂದನೆ ಸಮಾರಂಭ ಸಂತಸ ತಂದಿದೆ’ ಎಂದು ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಭೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಾಸಿಕ ಶಿವಾನುಭವ, ಸಾವಿತ್ರಿಬಾಯಿ ಫುಲೆ ಅವರ ಜಯಂತಿ, ವೈ.ಎಂ. ಭಜಂತ್ರಿ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಧಾರವಾಡ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಸದಸ್ಯ ಜಿನದತ್ತ ಹಡಗಲಿ, ‘35 ವರ್ಷಗಳ ಕಾಲ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ವೈ.ಎಂ. ಭಜಂತ್ರಿ ಅವರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತ ಶೈಕ್ಷಣಿಕ ಸೇವೆ ಸಲ್ಲಿಸಿದ್ದಾರೆ’ ಎಂದು ಹೇಳಿದರು.

ADVERTISEMENT

ವೈ.ಎಂ. ಭಜಂತ್ರಿ ಮಾತನಾಡಿ, ‘1991ರಲ್ಲಿ ಶೈಕ್ಷಣಿಕ ಸೇವೆ ಆರಮಭಿಸಿದ ನಾನು ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಭಾವಿಸಿ ಶಿಕ್ಷಣ ನೀಡಿದ್ದೇನೆ’ ಎಂದರು.

ಅಖಿಲ ಭಾರತ ದಲಿತ ಸಾಹಿತ್ಯ ಪರಿಷತ್‌ ರಾಜ್ಯ ಘಟಕ ಅಧ್ಯಕ್ಷ ಅರ್ಜುನ ಗೊಳಸಂಗಿ, ವೈ.ಎನ್. ಪಾಪಣ್ಣವರ ಮಾತನಾಡಿದರು. ಸಂಜೀವ ಜೋಗಿ, ಸ್ನೇಹಾ ಜೋಗಿ ವಚನ ಸಾಹಿತ್ಯ ಪ್ರಸ್ತುತ ಪಡಿಸಿದರು. ಈ ವೇಳೆ ಶಿರೋಳದ ಮಾದಾರ ಚನ್ನಯ್ಯ ಐಟಿಐ ಕಾಲೇಜು ಪ್ರಾಚಾರ್ಯ ಬಿ.ಎಸ್. ಸಾಲಿಮಠ, ನಿವೃತ್ತ ಪ್ರಾಧ್ಯಾಪಕ ಪಿ.ಎಸ್. ಅಣ್ಣಿಗೇರಿ, ಶಿಕ್ಷಕರಾದ ಜಯಶ್ರೀ ವಸ್ತ್ರದ, ಎನ್.ಬಿ. ಗಾಣಿಗೇರ ಅವರನ್ನು ಸನ್ಮಾನಿಸಲಾಯಿತು.

ಪಿ.ಎಫ್. ಆನಂದ್ರಬಾವಿ, ಮಹಾಂತೇಶ ಹಿರೇಮಠ, ಜಿ.ಬಿ. ಧೂಪದ, ಶಿವಾನಂದ ಜೋಗಿ, ದಿಲೀಪ್ ನದಾಫ್ ಇದ್ದರು. ಭೀಮಣ್ಣ ಕುರಿ ಸ್ವಾಗತಿಸಿದರು. ಆರ್.ಬಿ. ಚಿನಿವಾಲರ ನಿರೂಪಿಸಿದರು. ರಮೇಶ ಐನಾಪುರ ವಂದಿಸಿದರು.

ನರಗುಂದ ತಾಲ್ಲೂಕಿನ ಭೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಾಸಿಕ ಶಿವಾನುಭವ ಹಾಗೂ ವೈ.ಎಂ. ಭಜಂತ್ರಿ ಅಭಿನಂದನಾ ಕಾರ್ಯಕ್ರಮದಲ್ಲಿ ಜಿನದತ್ತ ಹಡಗಲಿ ಮಾತನಾಡಿದರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.