ADVERTISEMENT

ಮುಳಗುಂದ | ರಸ್ತೆ ಅಭಿವೃದ್ದಿಗೆ ಆಗ್ರಹಿಸಿ ದಂಪತಿ ಧರಣಿ ಸತ್ಯಾಗ್ರಹ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2022, 6:10 IST
Last Updated 16 ಡಿಸೆಂಬರ್ 2022, 6:10 IST
ಮುಳಗುಂದ ಸಮೀಪದ ಕಲ್ಲೂರ ಗ್ರಾಮದ ಚನ್ನಬಸಯ್ಯ ಹಿರೇಮಠ ದಂಪತಿ  ವಾರ್ಡ್‌ ಸಂಖ್ಯೆ 2ರಲ್ಲಿ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಚಿಂಚಲಿ ಗ್ರಾಪಂ ಮುಂದೆ ಧರಣೆ ನಡೆಸಿದರು
ಮುಳಗುಂದ ಸಮೀಪದ ಕಲ್ಲೂರ ಗ್ರಾಮದ ಚನ್ನಬಸಯ್ಯ ಹಿರೇಮಠ ದಂಪತಿ  ವಾರ್ಡ್‌ ಸಂಖ್ಯೆ 2ರಲ್ಲಿ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಚಿಂಚಲಿ ಗ್ರಾಪಂ ಮುಂದೆ ಧರಣೆ ನಡೆಸಿದರು   

ಚಿಂಚಲಿ(ಮುಳಗುಂದ) : ಸಮೀಪದ ಕಲ್ಲೂರ ಗ್ರಾಮದಲ ವಾರ್ಡ್‌ ಸಂಖ್ಯೆ 2ರಲ್ಲಿ ರಸ್ತೆ ಅಭಿವೃದ್ಧಿಗೆ ಮುಂದಾಗಬೇಕೆಂದು ಆಗ್ರಹಿಸಿ ಚನ್ನಬಸಯ್ಯ ಹಿರೇಮಠ ದಂಪತಿ ಇಲ್ಲಿನ ಗ್ರಾಮ ಪಂಚಾಯ್ತಿ ಎದುರು ಎರಡು ದಿನ ಧರಣಿ ಸತ್ಯಾಗ್ರಹ ನಡೆಸಿದರು.

ಈ ಕುರಿತು ಚನ್ನಬಸಯ್ಯ ಹಿರೇಮಠ ಮಾತನಾಡಿ, ‘ನಮ್ಮ ಮನೆಗೆ ಕಳೆದ ಮೂವತ್ತು ವರ್ಷಗಳಿಂದ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಒತ್ತುವರಿಯಾಗಿ ಕಟ್ಟಡ ನಿರ್ಮಾಣವಾಗಿದೆ. ನಾವು ಸುಮಗಮ ರಸ್ತೆ ಇಲ್ಲದೆ ನಿತ್ಯ ಸಮಸ್ಯೆ ಎದುರಿಸುತ್ತಿದ್ದೇವೆ. ರಸ್ತೆ ಅಭಿವೃದ್ಧೆ ಮಾಡುವಂತೆ ಹಲವು ಬಾರಿ ಸಂಬಂಧಿಸಿದ ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ, ವಾರ್ಡ್‌ ಸದಸ್ಯರ ಮನವಿ ಸಲ್ಲಿಸಿದರೂ ಈ ವರೆಗೆ ಯಾವುದೇ ಪ್ರಯೋಜನವಾಗಿಲ್ಲ. ರಸ್ತೆ ಅಭಿವೃದ್ಧಿ ಮಾಡುವವರೆಗೂ ಸತ್ಯಾಗ್ರಹ ನಡೆಸುತ್ತೇವೆ ಎಂದರು.

ನಂತರ ಗ್ರಾಮ ಪಂಚಾಯ್ತಿ ಸದಸ್ಯ ಬಸವರಾಜ ರಾಮರಡ್ಡಿ, ಕಾರ್ಯದರ್ಶಿ ಟಿ.ಎಲ್. ದೇಸಾಯಿ ಮಾತನಾಡಿ, ‘15 ನೇ ಹಣಕಾಸು ಯೋಜನೆಯಡಿ ರಸ್ತೆ ನಿರ್ಮಾಣಕ್ಕಾಗಿ ₹ 1 ಲಕ್ಷ ಅನುದಾನದಲ್ಲಿ ಕ್ರೀಯಾಯೋಜನೆ ರೂಪಿಸಿಲಾಗಿದ್ದು, ರಸ್ತೆ ಅಭಿವೃದ್ಧಿ ಪಡಿಸುತ್ತೇವೆ. ರಸ್ತೆ ಒತ್ತುವರಿ ಮಾಡಿದ್ದನ್ನು ಪರಿಶೀಲಿಸಿ ಅಕ್ರಮ ಕಟ್ಟಡ ತೆರವುಗೊಳಿಸುವ ಭರವಸೆ ನೀಡಿದರು. ನಂತರ ಹಿರೇಮಠ ದಂಪತಿ ಬುಧವಾರ ಧರಣಿ ಸತ್ಯಾಗ್ರಹ ಕೈಬಿಟ್ಟರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.