
ಶಿರಹಟ್ಟಿ: ‘ಹಿಂದೂ ವಿರೋಧಿ ನೀತಿ ಅನುಸರಿಸುತ್ತಿರುವ ಪಿಎಸ್ಐ ಈರಣ್ಣ ರಿತ್ತಿ ಅವರನ್ನು ವರ್ಗಾಯಿಸುವಂತೆ ಒತ್ತಾಯಿಸಿ ವಿವಿಧ ಹಿಂದೂಪರ ಸಂಘಟನೆಗಳ ವತಿಯಿಂದ ಸ್ಥಳೀಯ ತಹಶೀಲ್ದಾರ್ ಕಚೇರಿಯಯಲ್ಲಿ ಸೋಮವಾರ ಧರಣಿ ನಡೆಸಿ ತಹಶೀಲ್ದಾರ್ ಕೆ.ರಾಘವೇಂದ್ರ ರಾವ್ ಅವರಿಗೆ ಮನವಿ ಸಲ್ಲಿಸಲಾಯಿತು.
ಶ್ರೀರಾಮ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಖಾನಪ್ಪನವರ ಮಾತನಾಡಿ, ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಹಿಂದೂಗಳ ಮೇಲೆ ದೌರ್ಜನ್ಯ ಅಧಿಕವಾಗಿದೆ. ನ. 10ರಂದು ದೇವಿಹಾಳ ತಾಂಡಾದ ಸೋಮಪ್ಪ ಲಮಾಣಿ ಎಂಬ ವ್ಯಕ್ತಿಯ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಮನಬಂದಂತೆ ಥಳಿಸಿದ್ದು, ಜಾತಿ ನಿಂದನೆ ಮಾತುಗಳನ್ನಾಡಿ ಲಂಬಾಣಿ ಸಮಾಜಕ್ಕೆ ಅವಮಾನ ಮಾಡಿದ್ದಾರೆ’ ಎಂದು ಆರೋಪಿಸಿದರು.
ಒಂದು ವಾರದೊಳಗೆ ಪಿಎಸ್ಐ ಈರಣ್ಣ ರಿತ್ತಿ ಅವರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಜಿಲ್ಲೆಯಾದ್ಯಂತ ಹೋರಾಟ ನಡೆಸಲಾಗುವುದು ಎಂದರು. ಸಂತೋಷ ಕುರಿ, ಪರಶುರಾಮ ಡೊಂಕಬಳ್ಳಿ, ಪ್ರಾಣೇಶ್, ಮುತ್ತು ಕರ್ಜಕಣ್ಣವರಕಣ್ಣವರ, ಚಿನ್ನು ಹಾಳದೋತದ್, ಹನುಮಂತ ರಾಮಗೇರಿ, ಮುತ್ತು ಗೊಜನೂರ್, ಅಜಯ ಬಳಗನ್ನವರ್, ವೆಂಕಟೇಶ್ ದೊಡ್ಡಮನಿ, ವಿಶಾಲ್ ಗೋಕಾವಿ, ಸಾಗರ್ ಹುಯಿಲಗೋಳ, ಸೋಮಪ್ಪ ಲಮಾಣಿ, ಗಂಗವ್ವ ಲಮಾಣಿ, ಗೀತವ್ವ ಲಮಾಣಿ, ಸೋಮು ಬಂಡಿವಡ್ಡರ, ರವಿ ಲಮಾಣಿ, ಕಿಮೇಶ್ ಲಮಾಣಿ, ಪರಶುರಾಮ ಜೆಲ್ಲಿಗೇರಿ, ನೀಲಪ್ಪ ಸಿಪಾಯಿ, ಹನುಮಂತ್ ಶಿರಹಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.