
ಪ್ರಜಾವಾಣಿ ವಾರ್ತೆ
ಚನ್ನರಾಯಟ್ಟಣ: ಪಟ್ಟಣದ ಸಂಚಾರಿ ಪೊಲೀಸ್ ಠಾಣೆ ತಿರುವಿನಲ್ಲಿ ಶುಕ್ರವಾರ ಮಧ್ಯಾಹ್ನ ನಡೆದ ಸಾರಿಗೆ ಸಂಸ್ಥೆ ಬಸ್–ಬೈಕ್ ಡಿಕ್ಕಿಯಲ್ಲಿ ಪಟ್ಟಣದ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಬೀರಲಿಂಗ (41) ಮೃತಪಟ್ಟಿದ್ದಾರೆ.
ಘಟನೆಯಲ್ಲಿ ತಲೆಗೆ ಪೆಟ್ಟಾದ ಬೀರಲಿಂಗ ಅವರನ್ನು ಚನ್ನರಾಯಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬಿ.ಜಿ. ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಪಾರ್ಥಿವ ಶರೀರವನ್ನು ಪಟ್ಟಣದ ಪೊಲೀಸ್ ಠಾಣೆ ಬಳಿ ಸ್ವಲ್ಪ ಹೊತ್ತು ದರ್ಶಕ್ಕೆ ಇಡಲಾಗಿತ್ತು. ಎಸ್ಪಿ ಶುಭನ್ವಿತ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿಧಿ, ಡಿವೈಎಸ್ಪಿ ಕುಮಾರ್.ಎನ್. ಭೇಟಿ ನೀಡಿದ್ದರು. ನಂತರ ಪಾರ್ಥಿವ ಶರೀರವನ್ನು ಬಾಗೂರು ಹೋಬಳಿಯ ಹುಟ್ಟೂರು ಕಾಮನಾಯಕನಹಳ್ಳಿಗೆ ಕೊಂಡೊಯ್ಯಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.