ADVERTISEMENT

ರಾಜ್ಯದಲ್ಲಿ ಜೆಡಿಎಸ್ ಪರ ಒಲವು, ಬೊಮ್ಮಾಯಿ, ಸಿದ್ದು ಫಿಲ್ಮಂ‌ ಓಡಲ್ಲ: ಇಬ್ರಾಹಿಂ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2022, 12:34 IST
Last Updated 13 ಸೆಪ್ಟೆಂಬರ್ 2022, 12:34 IST
ಸಿ.ಎಂ. ಇಬ್ರಾಹಿಂ
ಸಿ.ಎಂ. ಇಬ್ರಾಹಿಂ   

ಹಾಸನ: ರಾಜ್ಯದಾದ್ಯಂತ ಜೆಡಿಎಸ್ ಪರವಾದ ವಾತಾವರಣ ಇದೆ. ಜನರು ಕುಮಾರಸ್ವಾಮಿ, ದೇವೇಗೌಡರ ಪರವಾಗಿದ್ದಾರೆ. ಬೊಮ್ಮಾಯಿ, ಸಿದ್ದರಾಮಯ್ಯ ಫಿಲ್ಮಂ ಓಡಲ್ಲ‌ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಲೇವಡಿ ಮಾಡಿದರು.

ಪ್ರಕಾಶ್ ಅವರಿಗಿದ್ದ ದೊಡ್ಡ ಹೃದಯ ಸ್ವರೂಪ್ ನಲ್ಲೂ ಇದೆ. ದೊಡ್ಡ ಮನಸ್ಸು ನಿಮ್ಮನ್ನು ಮುಂದಕ್ಕೆ ಕರೆದುಕೊಂಡು ಹೋಗುತ್ತದೆ. ದೇವೇಗೌಡರಿಗೆ ಇರುವ ಮನಸ್ಸೇ ಕುಮಾರಸ್ವಾಮಿ ಅವರಲ್ಲಿದೆ. ಅದಕ್ಕೆ ಅವರು ಮುಖ್ಯಮಂತ್ರಿಯಾದರು ಎಂದು ಹೇಳಿದರು.

ಕುಮಾರಸ್ವಾಮಿ ಅವರು ರಾಜ್ಯದಲ್ಲಷ್ಟೇ ಅಲ್ಲ, ಕೇಂದ್ರ ಮಟ್ಟದಲ್ಲೂ ಪ್ರಭಾವಿ ರಾಜಕಾರಣಿಯಾಗಿದ್ದಾರೆ.

ಓದಿ...ನಾವು ರಾಜ ಮನೆತನದವರಲ್ಲ,ಬಡ ರೈತನ ಮಕ್ಕಳು:ಎಚ್.ಡಿ. ಕುಮಾರಸ್ವಾಮಿ

ರಾಜ್ಯದಲ್ಲಿ ಹಿಂದುಳಿದವರು, ಅಲ್ಪಸಂಖ್ಯಾತರು ಜೆಡಿಎಸ್ ಜೊತೆಗಿದ್ದಾರೆ. ಭಗವಂತನ, ಜನರ ಆಶೀರ್ವಾದದಿಂದ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ ಎಂದರು.

ದೇವೇಗೌಡರು ಕೃಷ್ಣಾ ಮೇಲ್ದಂಡೆ ಯೋಜನೆಗೆ ನನ್ನ ಪ್ರಧಾನಿ ಹುದ್ದೆ ಹೋದರೂ ಚಿಂತೆ ಇಲ್ಲ ಎಂದು ಹೇಳಿದ್ದರು ಎಂದು ಸ್ಮರಿಸಿದರು.

ಸ್ವರೂಪ್ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಪ್ರಕಾಶ್ ಅವರ ಜೊತೆ ಕೆಲಸ ಮಾಡಿದ್ದೇನೆ‌. ಇವತ್ತು ಸ್ವರೂಪ್ ರೀತಿಯಲ್ಲಿ ಮತ್ತೊಬ್ಬ ಪ್ರಕಾಶ್ ನಮ್ಮ ಜೊತೆಗಿದ್ದಾರೆ. ಅದಕ್ಕೆ ನಾನು, ಕುಮಾರಸ್ವಾಮಿ, ರೇವಣ್ಣ ಜೊತೆಗೂಡಿ, ಪಕ್ಷದ ಅಧ್ಯಕ್ಷನಾಗಿ ಏನು ಮಾಡಬೇಕೋ ಅದನ್ನು ಮಾಡುತ್ತೇನೆ ಎಂದರು.

ಹಾಸನ, ಮಂಡ್ಯ, ಕೋಲಾರ ಜಿಲ್ಲೆಗಳು ಕಾಂಗ್ರೆಸ್ ಮುಕ್ತವಾಗಿವೆ. ಮುಸ್ಲಿಂ ಸಮಾಜವೇ ದೇವೇಗೌಡರ ಮಗ ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡಲಿದ್ದಾರೆ. ಮೋದಿ, ಸೋನಿಯಾ ಗಾಂಧಿ ಬಗ್ಗೆ ನಮಗೆ ಚಿಂತೆ ಇಲ್ಲ. ರಾಜ್ಯದ ಜನರ ಬಗ್ಗೆ ಮಾತ್ರ ನಮಗೆ ಚಿಂತೆ ಇದೆ. ನಿಮ್ಮ ಆಶೀರ್ವಾದ ನಮ್ಮ ಜೊತೆಗಿದ್ದರೆ, 25 ವರ್ಷ ಜೆಡಿಎಸ್ ಸರ್ಕಾರ ಅಧಿಕಾರದಲ್ಲಿ ಇರಲಿದೆ ಎಂದು ಹೇಳಿದರು.

ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ.‌ ಸ್ವರೂಪ್ ಗೆ ಅಧಿಕಾರ ಇಲ್ಲದೇ ಇಷ್ಟೊಂದು ಜನ ಬೆಂಬಲವಿದೆ.‌ ನಿಮ್ಮ ಪರವಾಗಿ ನಾವು ಏನು ಮಾಡಬೇಕೋ ಮಾಡುತ್ತೇವೆ.ಕುಮಾರಸ್ವಾಮಿ ಸರ್ಕಾರದ ಹಗರಣಗಳನ್ನು ತೆಗೆಯಲಿದ್ದಾರೆ. ಜೆಡಿಎಸ್ ಗೆಲುವಿಗೆ ಎಲ್ಲರೂ ಸಂಕಲ್ಪ‌ ಮಾಡಿ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT