ಸಕಲೇಶಪುರ: ತಾಲ್ಲೂಕಿನ ಕರಡಿಗಾಲ ಗ್ರಾಮದ ರಮ್ಯ ಧರ್ಮರಾಜು ಅವರ ಪುತ್ರ ನಿಧಿತ್ ಗೌಡ, ಭಗತ್‌ಗೌಡ ಖಜಕೀಸ್ತಾನ್‌ನಲ್ಲಿ ಇತ್ತೀಚೆಗೆ ನಡೆದ ಏಷ್ಯನ್ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಉತ್ತಮ ಸಾಧನೆ ತೋರಿದ್ದಾರೆ.
ನಿಧಿತ್ ಗೌಡ ಚಿನ್ನದ ಪದಕ, ಭಗತ್‌ಗೌಡ ಕಂಚಿನ ಪದಕ ಪಡೆದು ಕೀರ್ತಿ ತಂದಿದ್ದಾರೆ. ಇವರು ಬೆಂಗಳೂರಿನ ಜೆಸಿ ನಗರದ ಆರ್ಮಿ ಪಬ್ಲಿಕ್ ಶಾಲೆಯ (ಪಿಆರ್‌ಟಿಸಿ)ಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.