ADVERTISEMENT

ಆಲೂರು: ಅಕ್ರಮ ಮರಳು ವಶ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2025, 13:52 IST
Last Updated 31 ಮಾರ್ಚ್ 2025, 13:52 IST
ಆಲೂರು ತಾಲ್ಲೂಕಿನ ಕಿತ್ತಗೆರೆಯ ಹೇಮಾವತಿ ನದಿಯಲ್ಲಿ ಅಕ್ರಮವಾಗಿ ತೆಗೆದಿದ್ದ ಮರಳು ಮತ್ತು ತೆಪ್ಪಗಳನ್ನು ಗಣಿಗಾರಿಕೆ, ಪೊಲೀಸರ ಸಹಕಾರದಿಂದ ಗ್ರೇಡ್-2 ತಹಸೀಲ್ದಾರ್ ಕೆ.ಆರ್.ಪೂರ್ಣಿಮಾ ವಶಪಡಿಸಿಕೊಂಡರು
ಆಲೂರು ತಾಲ್ಲೂಕಿನ ಕಿತ್ತಗೆರೆಯ ಹೇಮಾವತಿ ನದಿಯಲ್ಲಿ ಅಕ್ರಮವಾಗಿ ತೆಗೆದಿದ್ದ ಮರಳು ಮತ್ತು ತೆಪ್ಪಗಳನ್ನು ಗಣಿಗಾರಿಕೆ, ಪೊಲೀಸರ ಸಹಕಾರದಿಂದ ಗ್ರೇಡ್-2 ತಹಸೀಲ್ದಾರ್ ಕೆ.ಆರ್.ಪೂರ್ಣಿಮಾ ವಶಪಡಿಸಿಕೊಂಡರು   

ಆಲೂರು: ತಾಲ್ಲೂಕಿನ ಕಿತ್ತಗೆರೆ ವ್ಯಾಪ್ತಿ ಹೇಮಾವತಿ ನದಿಯಲ್ಲಿ ಅಕ್ರಮವಾಗಿ ತೆಗೆದಿದ್ದ ಮರಳು ಮತ್ತು ತೆಪ್ಪಗಳನ್ನು ಗ್ರೇಡ್-2 ತಹಸೀಲ್ದಾರ್ ಕೆ.ಆರ್.ಪೂರ್ಣಿಮಾ ನೇತೃತ್ವದಲ್ಲಿ ವಶಪಡಿಸಿಕೊಂಡು ನಿಯಮಾನುಸಾರ ಕ್ರಮ ವಹಿಸಲಾಗಿದೆ.

ಅಲೂರು, ಸಕಲೇಶಪುರ ಮತ್ತು ಬೇಲೂರು ತಾಲ್ಲೂಕು ವ್ಯಾಪ್ತಿ ಯಲ್ಲಿ ಅನಧಿಕೃತವಾಗಿ ಮರಳು ಗಣಿಗಾರಿಕೆ ನಡೆಯುತ್ತಿದೆ ಎಂಬ ಸುದ್ದಿ ತಿಳಿದು ಗಣಿಗಾರಿಕೆ ಅಧಿಕಾರಿಗಳು, ಪೊಲೀಸರು ಮತ್ತು ತಾಲ್ಲೂಕಿನ ಮರಳು ಸಮಿತಿ ಸದಸ್ಯರೊಂದಿಗೆ ತಡರಾತ್ರಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ತಿಳಿಸಿದರು.

ಮರಳನ್ನು ವಶಕ್ಕೆ ಪಡೆದ ನಂತರ ಸ್ಥಳಕ್ಕೆ ಟ್ರ್ಯಾಕ್ಟರ್, ಜೆಸಿಬಿ ತರಿಸಿಕೊಂಡು ಕೆ.ಎಂ.ಎಂ.ಸಿ.ಆರ್ -1994 ನಿಯಮದಲ್ಲಿಲ ಅವಕಾಶದಂತೆ, ಸ್ಥಳದಲ್ಲೇ ಸದರಿ ಮರಳನ್ನು ಸರ್ಕಾರಿ ಕಾಮಗಾರಿಗೆ ಲೋಕೋಪಯೋಗಿ ಎಸ್.ಆರ್ ದರದಂತೆ ಸಂಬಂಧಿಸಿದ ಶುಲ್ಕ ₹63,300 ಸರ್ಕಾರಕ್ಕೆ ಪಾವತಿಸಿ ಮರಳನ್ನು ತಡರಾತ್ರಿ 3 ಗಂಟೆಗೆ ವಿಲೇವಾರಿ ಮಾಡಲಾಯಿತು ಎಂದರು.

ADVERTISEMENT

ವಶಕ್ಕೆ ಪಡೆದ ಎರಡು ತೆಪ್ಪಗಳು, ಆರು ಲಾರಿ ಲೋಡ್ ಮರಳನ್ನು ಆಲೂರು ಪೊಲೀಸ್ ಠಾಣೆಗೆ ನೀಡಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.