ಸಾಂದರ್ಭಿಕ ಚಿತ್ರ
– ಎ.ಐ ಚಿತ್ರ
ಅರಕಲಗೂಡು: ಮಾದಾಪುರ ಗ್ರಾಮದಲ್ಲಿ ಮಂಗಳವಾರ ರಾತ್ರಿ ಅಂಗಡಿಯಿಂದ ಸಾಮಗ್ರಿ ಖರೀದಿಸಿ ಮನೆಗೆ ಮರಳುತ್ತಿದ್ದ ಕಮಲಮ್ಮ (60) ಆನೆ ದಾಳಿಯಿಂದ ತೀವ್ರ ಗಾಯಗೊಂಡಿದ್ದಾರೆ.
ರಾತ್ರಿ 9.30ಕ್ಕೆ ಮಳೆ ಬರುತ್ತಿದ್ದ ಕಾರಣ ಛತ್ರಿ ಹಿಡಿದು ಬರುತ್ತಿದ್ದ ಕಮಲಮ್ಮ ಅವರಿಗೆ ಕಾಡಾನೆ ಬರುತ್ತಿರುವುದು ಕಂಡಿರಲಿಲ್ಲ. ಆನೆ ಅವರ ತೊಡೆಗೆ ತಿವಿದಿದ್ದು ತೀವ್ರ ಗಾಯಗೊಂಡಿದ್ದರು. ಚೀರಾಟ ಕೇಳಿ ಅಕ್ಕಪಕ್ಕದವರು ಬಂದಿದ್ದರಿಂದ ಆನೆ ಅಲ್ಲಿಂದ ಓಡಿಹೋಗಿದೆ. ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗೆ ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.