ADVERTISEMENT

ಶೇ 40ರಷ್ಟು ಕಮಿಷನ್‌ ಕೊಟ್ಟು ಯಾರು ಕೆಲಸ ಮಾಡೋಕೆ ಆಗುತ್ತೆ: ಸಚಿವ ಮುನಿರತ್ನ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2022, 15:39 IST
Last Updated 15 ಏಪ್ರಿಲ್ 2022, 15:39 IST
ಮುನಿರತ್ನ
ಮುನಿರತ್ನ   

ಹಾವೇರಿ: ‘ಶೇ 40ರಷ್ಟು ಕಮಿಷನ್‌ ಕೊಟ್ಟು ಯಾರು ಕೆಲಸ ಮಾಡೋಕೆ ಆಗುತ್ತೆ? ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಕೆಲವರು ಒಳಸಂಚು ಮಾಡಿದ್ದಾರೆ. ಗುತ್ತಿಗೆದಾರ ಸಂತೋಷ್‌ ಪಾಟೀಲ ಅವರಾಗಿಯೇ ಸತ್ತಿಲ್ಲ, ಆತ್ಮಹತ್ಯೆಗೆ ಪ್ರಚೋದನೆ ಕೊಟ್ಟು ಮಾಡಿಸಿದ್ದಾರೆ’ ಎಂದು ತೋಟಗಾರಿಕಾ ಸಚಿವ ಮುನಿರತ್ನ ಅವರು ಕಾಂಗ್ರೆಸ್‌ ಆರೋಪಕ್ಕೆ ತಿರುಗೇಟು ನೀಡಿದರು.

ಬಜೆಟ್‌ನಲ್ಲಿ ಘೋಷಿತವಾದ ಮಾವು ಸಂಸ್ಕರಣಾ ಘಟಕ ಸ್ಥಾಪನೆಗೆ ಹಾನಗಲ್‌ ತಾಲ್ಲೂಕು ಯಳವಟ್ಟಿ ಗ್ರಾಮದಲ್ಲಿ ಗುರುತಿಸಲಾದ ಜಾಗವನ್ನು ಶುಕ್ರವಾರ ಪರಿಶೀಲಿಸಿದ ಸಂದರ್ಭ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

‘ಕಾರ್ಯಾದೇಶ ಇಲ್ಲದೇ ನಾನು ಕಾಮಗಾರಿ ಮಾಡಿದ್ದೀನಿ, ನನಗೆ ಹಣ ಕೊಡಿ ಎಂದು ಕೇಳಿದರೆ ಯಾವ ಆಧಾರದ ಮೇಲೆ ಹಣ ಕೊಡಬೇಕು? ಸಂತೋಷ್‌ ಸಾವಿನ ಬಗ್ಗೆ ತನಿಖೆ ನಡೆದರೆ ಸತ್ಯ ಹೊರಬೀಳಲಿದೆ’ ಎಂದರು.

ADVERTISEMENT

‘ವಿಧಾನಸೌಧದ ಎಲ್ಲ ಗೋಡೆಗಳು ದುಡ್ಡು ದುಡ್ಡು ಅನ್ನುತ್ತವೆ’ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ, ‘ರಾಜ್ಯದಲ್ಲಿ ಯಾರ ಬಳಿ ದುಡ್ಡು ಜಾಸ್ತಿ ಇದೆ ಎಂದು ಕೇಳಿದರೆ ಪ್ರತಿ ಗೋಡೆಗಳೂ ಕೂಡ ಹೇಳುತ್ತವೆ. ರಸ್ತೆಯಲ್ಲಿರುವ ‘ಲೈಟ್‌ ಕಂಬ’ ಕೇಳಿದರೂ ಹೇಳುತ್ತವೆ’ ಎಂದು ತಿರುಗೇಟು ನೀಡಿದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.