ADVERTISEMENT

ಬಸವರಾಜ ಬೊಮ್ಮಾಯಿ ದೊಡ್ಡವರು, ನಮಗೆ ಸಿಗುವುದು ಕಷ್ಟ: ಬಿ.ಸಿ. ಪಾಟೀಲ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 7:26 IST
Last Updated 28 ಜುಲೈ 2025, 7:26 IST
<div class="paragraphs"><p>ಬಸವರಾಜ ಬೊಮ್ಮಾಯಿ ಮತ್ತು&nbsp;ಬಿ.ಸಿ. ಪಾಟೀಲ</p></div>

ಬಸವರಾಜ ಬೊಮ್ಮಾಯಿ ಮತ್ತು ಬಿ.ಸಿ. ಪಾಟೀಲ

   

ಹಾವೇರಿ: ‘ಮಾಜಿ ಮುಖ್ಯಮಂತ್ರಿಯೂ ಆಗಿರುವ ಸಂಸದ ಬಸವರಾಜ ಬೊಮ್ಮಾಯಿ ಅವರು ದೊಡ್ಡವರು. ಅವರ ತಂದೆಯೂ ಮುಖ್ಯಮಂತ್ರಿಯಾಗಿದ್ದವರು. ಅಂಥವರು ನಮಗೆ ಸಿಗೋದು ಕಷ್ಟ’ ಎಂದು ಹಿರೇಕೆರೂರಿನ ಮಾಜಿ ಶಾಸಕರೂ ಆಗಿರುವ ಬಿಜೆಪಿ ಮುಖಂಡ ಬಿ.ಸಿ. ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೆಹಲಿಗೆ ಹೋಗಿದ್ದ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಲು ಅವಕಾಶ ಸಿಗಲಿಲ್ಲ. ಇದರಿಂದ ಬೇಸರವಾಗಿದೆ. ಅದನ್ನು ಫೇಸ್‌ಬುಕ್‌ ಪೋಸ್ಟ್‌ ಮೂಲಕ ಹೊರಹಾಕಿದ್ದೇನೆ’ ಎಂದರು.

ADVERTISEMENT

‘ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ಭದ್ರಾವತಿಯಲ್ಲಿ ಪ್ರವಾಸಿ ತಾಣವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಅದೇ ಮಾದರಿಯಲ್ಲಿ ಸರ್ವಜ್ಞರ ಸ್ಥಳವನ್ನೂ ಅಭಿವೃದ್ಧಿಪಡಿಸುವಂತೆ ಸಂಸದರನ್ನು ಕೋರಬೇಕಿತ್ತು. ಜಿಲ್ಲೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದ ಬೊಮ್ಮಾಯಿ, ‘ದೆಹಲಿಗೆ ಬನ್ನಿ ಮಾತನಾಡೋಣ. ಬರುವಾಗ ನಮ್ಮ ಆಪ್ತ ಸಹಾಯಕನಿಗೆ ಕರೆ ಮಾಡಿ’ ಎಂದಿದ್ದರು’ ಎಂದು ಹೇಳಿದರು.

‘ಜುಲೈ 22ರಂದು ದೆಹಲಿಗೆ ಹೋಗಿದ್ದೆ. ಬಸವರಾಜ ಬೊಮ್ಮಾಯಿ ಅವರಿಗೆ ಕರೆ ಮಾಡಿದರೂ ಅವರು ಸ್ವೀಕರಿಸುವುದಿಲ್ಲ. ಹೀಗಾಗಿ, ಅವರ ಆಪ್ತ ಸಹಾಯಕನಿಗೆ ಕರೆ ಮಾಡಿ ಭೇಟಿಗೆ ಅವಕಾಶ ಕೋರಿದ್ದೆ. ‘ಬೊಮ್ಮಾಯಿ ಅವರು ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾರೆ. ಅವರನ್ನು ಸಂಪರ್ಕಿಸಲಾಗುವುದು’ ಎಂದು ಹೇಳಿದ್ದ ಆಪ್ತ ಸಹಾಯಕ ಕರೆ ಕಡಿತಗೊಳಿಸಿದ್ದ. ಅದಾದ ನಂತರ, ಭೇಟಿಗೆ ಯಾವುದೇ ಅವಕಾಶ ಸಿಗಲಿಲ್ಲ. ಬಿ.ವೈ. ರಾಘವೇಂದ್ರ, ಸಚಿವರಾದ ಶೋಭಾ ಕರಂದ್ಲಾಜೆ ಅವರನ್ನು ಭೇಟಿಯಾದೆ. ಜೊತೆಗೆ, ಕರ್ನಾಟಕ ಭವನಕ್ಕೆ ಬಂದಿದ್ದ ಸಿದ್ದರಾಮಯ್ಯ ಅವರನ್ನೂ ಭೇಟಿಯಾದೆ. ಆದರೆ, ನಮ್ಮ ಸಂಸದರ ಭೇಟಿಗೆ ಅವಕಾಶ ಸಿಗಲಿಲ್ಲ. ಇದರಿಂದ ಬೇಜಾರಾಯಿತು’ ಎಂದು ಅಸಮಾಧಾನ ಹೊರಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.