ADVERTISEMENT

ಬ್ಯಾಡಗಿ ಮೆಣಸಿನಕಾಯಿ: ಹೆಚ್ಚಿದ ಆವಕ, ಬೆಲೆಯಲ್ಲಿ ಚೇತರಿಕೆ 

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 4:15 IST
Last Updated 9 ಡಿಸೆಂಬರ್ 2025, 4:15 IST
<div class="paragraphs"><p>ಬ್ಯಾಡಗಿ ಮೆಣಸಿನಕಾಯಿ</p></div>

ಬ್ಯಾಡಗಿ ಮೆಣಸಿನಕಾಯಿ

   

ಬ್ಯಾಡಗಿ: ಇಲ್ಲಿಯ ಎಪಿಎಂಸಿ (ಕೃಷಿ ಉತ್ಪನ್ನ ಮಾರುಕಟ್ಟೆ)ಯಲ್ಲಿ 25,569 ಚೀಲ (7,392 ಕ್ವಿಂಟಲ್‌) ಮೆಣಸಿನಕಾಯಿ ಮಾರಾಟವಾಗಿದ್ದು, ಬೆಲೆಯಲ್ಲಿ ಮತ್ತೆ ಚೇತರಿಕೆ ಕಂಡು ಬಂದಿದೆ.

ಡಿ.4ರಂದು 24,396 ಚೀಲ (6,099 ಕ್ವಿಂಟಲ್‌) ಮೆಣಸಿನಕಾಯಿ ಮಾರಾಟವಾಗಿದ್ದವು. 26 ಚೀಲ ಬ್ಯಾಡಗಿ ಡಬ್ಬಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹ 68,585 ರಂತೆ, ಬ್ಯಾಡಗಿ ಕಡ್ಡಿ ಮೆಣಸಿನಕಾಯಿ ₹ 54,069 ರಂತೆ, ಗುಂಟೂರು ತಳಿ ₹ 16,509 ರಂತೆ ಗರಿಷ್ಠ ಬೆಲೆಯಲ್ಲಿ ಮಾರಾಟವಾಗಿವೆ.

ADVERTISEMENT

ಕಳೆದ ಗುರುವಾರಕ್ಕಿಂತ ಮೆಣಸಿನಕಾಯಿ ಗರಿಷ್ಠ ಬೆಲೆಯಲ್ಲಿ ₹ 4 ಸಾವಿರ ಹೆಚ್ಚಳವಾಗಿದೆ. ಬಳ್ಳಾರಿ, ರಾಯಚೂರು, ಕುಂದಗೋಳ, ಸಂಶಿ ಮತ್ತಿತರ ಕಡೆಗಳಲ್ಲಿ ಬೆಳೆದ ಹೊಸ ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿದೆ. ಇದರಿಂದ ಬ್ಯಾಡಗಿ ತಳಿ ಮೆಣಸಿನಕಾಯಿಗೆ ಬೇಡಿಕೆ ಹೆಚ್ಚಿದೆ. ಡಿ.8ರಂದು ಮಾರುಕಟ್ಟೆಗೆ ಒಟ್ಟು 4,600 ಲಾಟ್‌ ಮೆಣಸಿನಕಾಯಿ ಟೆಂಡರ್‌ಗೆ ಇಡಲಾಗಿದ್ದು, ಈ ಪೈಕಿ ತೇವಾಂಶ ಹೆಚ್ಚಿರುವ ಮತ್ತು ಗುಣಮಟ್ಟದ ಕೊರತೆ ಇರುವ 244 ಲಾಟ್‌ಗಳಿಗೆ ವರ್ತಕರು ಟೆಂಡರ್‌ ನಮೂದಿಸಿಲ್ಲ.

ಗುಣಮಟ್ಟದ ಮೆಣಸಿನಕಾಯಿಗೆ ಉತ್ತಮ ಬೆಲೆ ಸಿಗಲಿದೆ. ಕಾರಣ ರೈತರು ಒಣಗಿಸಿದ ಮೆಣಸಿನಕಾಯಿ ಮಾರಾಟಕ್ಕೆ ತರಬೇಕು ಎಂದು ವರ್ತಕಕರ ಸಂಘ ತಿಳಿಸಿದೆ. ಸರಾಸರು ಬೆಲೆಯಲ್ಲಿ ತುಸು ಏರಿಕೆ ಕಂಡು ಬಂದಿದ್ದು, ಬ್ಯಾಡಗಿ ಡಬ್ಬಿ ಮೆಣಸಿನಕಾಯಿ ₹ 36,009, ಬ್ಯಾಡಗಿ ಕಡ್ಡಿ ₹ 33,859 ಹಾಗೂ ಗುಂಟೂರ ತಳಿ ₹ 13,889ರಂತೆ ಮಾರಾಟವಾಗಿವೆ. ಇಂದಿನ ಟೆಂಡರ್ ಪ್ರಕ್ರಿಯೆಯಲ್ಲಿ ಒಟ್ಟು 262 ಖರೀದಿ ವರ್ತಕರು ಪಾಲ್ಗೊಂಡಿದ್ದರು ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.