ADVERTISEMENT

ಹಾವೇರಿ | ಬೆಂಕಿಗೆ ಸುಟ್ಟು ಕರಕಲಾದ ಕಬ್ಬು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 5:33 IST
Last Updated 8 ಅಕ್ಟೋಬರ್ 2025, 5:33 IST
   

ಹಾವೇರಿ: ಜಿಲ್ಲೆಯ ಸವಣೂರು ತಾಲ್ಲೂಕಿನ ಹಿರೇಮರಳಿಹಳ್ಳಿ ಜಮೀನೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಎರಡೂವರೆ ಎಕರೆ ಪ‍್ರದೇಶದಲ್ಲಿದ್ದ ಕಬ್ಬು ಬೆಳೆ ಸುಟ್ಟು ಕರಕಲಾಗಿದೆ.

ಅ. 6ರಂದು ನಡೆದಿರುವ ಅವಘಡ ಸಂಬಂಧ ಜಮೀನು ಮಾಲೀಕ ನಾಗರಾಜ ರುದ್ರಪ್ಪ ಹಡಗಲಿ ಅವರು ಸವಣೂರು ಠಾಣೆಗೆ ದೂರು ನೀಡಿದ್ದಾರೆ. ಅದರನ್ವಯ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.

‘ದೂರುದಾರರು ಏಳು ಎಕರೆ ಜಮೀನಿನಲ್ಲಿ ಕಬ್ಬು ಬೆಳೆಯುತ್ತಿದ್ದಾರೆ. ಇದೇ ಜಮೀನಿನಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ ಕಂಬವಿದೆ. ಇದೇ ಕಂಬದಿಂದ ಸಿಡಿದ ಬೆಂಕಿಯ ಕಿಡಿ, ಕಬ್ಬು ಬೆಳೆಗೆ ತಾಗಿರುವುದಾಗಿ ಆರೋಪಿಸುತ್ತಿದ್ದಾರೆ. ಕೆಲ ನಿಮಿಷಗಳಲ್ಲಿ ಎರಡೂವರೆ ಎಕರೆ ಪ್ರದೇಶದ ಕಬ್ಬಿನ ಬೆಳೆಗೆ ಬೆಂಕಿ ಪಸರಿಸಿತ್ತು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ, ಬೆಂಕಿ ನಂದಿಸಿದರು. ಇದರಿಂದ ₹2.50 ಲಕ್ಷದಷ್ಟು ನಷ್ಟವಾಗಿರುವುದಾಗಿ ದೂರುದಾರು ಹೇಳಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.