ಯಶೋಧಾ ವಂಟಗೋಡಿ
ಹಾವೇರಿ: ಜಿಲ್ಲಾ ಪೊಲೀಸ್ ಎಸ್‌ಪಿಯಾಗಿದ್ದ ಅಂಶುಕುಮಾರ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರ ಜಾಗಕ್ಕೆ ಯಶೋಧಾ ವಂಟಗೋಡಿ ಅವರನ್ನು ವರ್ಗಾಯಿಸಲಾಗಿದೆ.
ರಾಜ್ಯದ 30ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಜಿಲ್ಲೆಯಲ್ಲಿ ಕಳೆದ ಎರಡು ವರ್ಷದಿಂದ ಕೆಲಸ ಮಾಡುತ್ತಿದ್ದ ಅಂಶುಕುಮಾರ ಅವರನ್ನು ಕಾರಾಗೃಹದ ಎಸ್‌ಪಿ ಆಗಿ ವರ್ಗಾವಣೆ ಮಾಡಲಾಗಿದೆ.
ಕಾರಾಗೃಹದ ಎಸ್‌ಪಿ ಆಗಿದ್ದ ಯಶೋಧಾ ಅವರನ್ನು ಹಾವೇರಿಯ ನೂತನ ಎಸ್‌ಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.