ADVERTISEMENT

ಹಾವೇರಿಯಲ್ಲಿ ಭಾರಿ ಮಳೆ: ಸಂಚಾರ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2021, 16:36 IST
Last Updated 24 ಅಕ್ಟೋಬರ್ 2021, 16:36 IST
ಹಾವೇರಿ ನಗರದಲ್ಲಿ ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಹಾನಗಲ್‌ ರಸ್ತೆಯಲ್ಲಿ ಮೊಣಕಾಲುದ್ದ ನೀರು ಹರಿದ ಪರಿಣಾಮ ಬೈಕ್‌ ಸವಾರನೊಬ್ಬ ಪರದಾಡಿದ ದೃಶ್ಯ 
ಹಾವೇರಿ ನಗರದಲ್ಲಿ ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಹಾನಗಲ್‌ ರಸ್ತೆಯಲ್ಲಿ ಮೊಣಕಾಲುದ್ದ ನೀರು ಹರಿದ ಪರಿಣಾಮ ಬೈಕ್‌ ಸವಾರನೊಬ್ಬ ಪರದಾಡಿದ ದೃಶ್ಯ    

ಹಾವೇರಿ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಭಾನುವಾರ ರಾತ್ರಿ ಒಂದು ಗಂಟೆಗೂ ಹೆಚ್ಚು ಕಾಲ ಭಾರಿ ಮಳೆ ಸುರಿಯಿತು. ಗುಡುಗು ಸಿಡಿಲಿನ ಆರ್ಭಟ ಜೋರಾಗಿತ್ತು.

ಹಾವೇರಿ ನಗರದ ಹಾನಗಲ್‌ ರಸ್ತೆ ಮತ್ತು ಹಳೇ ಪಿ.ಬಿ.ರಸ್ತೆಯಲ್ಲಿ ಮೊಣಕಾಲುದ್ದ ನೀರು ಹರಿದ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಜನರು ರಸ್ತೆಯನ್ನು ದಾಟಲು ಸಾಧ್ಯವಾಗದಷ್ಟು ನೀರು ವೇಗವಾಗಿ ಹರಿಯಿತು. ರಾಜಕಾಲುವೆ ಭರ್ತಿಯಾಗಿ ಹಳೇ ಪಿ.ಬಿ.ರಸ್ತೆಯ ಮೇಲೆ ನೀರು ಹರಿದ ಪರಿಣಾಮ ಜನಸಂಚಾರ ಅಸ್ತವ್ಯಸ್ತಗೊಂಡಿತು.

ಚರಂಡಿಯಲ್ಲಿನ ಕೊಳಚೆ, ತ್ಯಾಜ್ಯ ರಸ್ತೆಯ ಮೇಲೆ ಹರಡಿದವು. ವಿದ್ಯಾನಗರ, ನಾಗೇಂದ್ರನಮಟ್ಟಿಯ ತಗ್ಗಿನ ಪ್ರದೇಶದ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಡಿದರು. ಹೋಟೆಲ್‌, ಶಾಪಿಂಗ್‌ ಮಾಲ್‌ಗಳಲ್ಲಿ ಸಿಲುಕಿಕೊಂಡ ಜನರು ಮನೆಗಳಿಗೆ ತೆರಳಲು ಸಾಧ್ಯವಾಗದೆ ಆತಂಕಕ್ಕೆ ಒಳಗಾದರು.

ADVERTISEMENT

ನೀರಿನಲ್ಲಿ ಸಿಲುಕಿದ ಬೈಕ್‌ಗಳು ಚಾಲನೆಗೊಳ್ಳದೆ ಸವಾರರು ಪರದಾಡಿದರು. ಆಟೊಗಳಿಗೆ ಹೆಚ್ಚಿನ ಬೇಡಿಕೆ ಇದ್ದರೂ, ಬಾಡಿಗೆ ಹೋಗಲು ಚಾಲಕರು ಹಿಂದೇಟು ಹಾಕುತ್ತಿದ್ದರು.ಹಾನಗಲ್‌ ರಸ್ತೆಯಲ್ಲಿರುವ ಅಗ್ನಿಶಾಮಕ ಠಾಣೆ ಮತ್ತು ವಸತಿಗೃಹಗಳ ಸುತ್ತ ನೀರು ಆವೃತವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.