ಹಾವೇರಿ: ರಾಣೆಬೆನ್ನೂರು ನಗರದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 27 ಕ್ವಿಂಟಲ್ ಪಡಿತರ ಅಕ್ಕಿಯನ್ನು ತಹಶೀಲ್ದಾರ್ ಶಂಕರ್ ಜಿ.ಎಸ್. ನೇತೃತ್ವದ ತಂಡ ಮಂಗಳವಾರ ವಶಪಡಿಸಿಕೊಂಡಿದೆ.
ರಾಣೆಬೆನ್ನೂರು ನಗರದ ವಿದ್ಯಾನಗರ ಬಡಾವಣೆಯ ದೀಪಕ್ ಕೊಟ್ಟೂರು ಎಂಬಾತ ಪಡಿತರ ಚೀಟಿಗಳಿಗೆ ವಿತರಿಸಿದ ಅಕ್ಕಿಯನ್ನು ಕಾನೂನು ಬಾಹಿರವಾಗಿ ಸಂಗ್ರಹಿಸಿ, ತನ್ನ ಲಾಭಕ್ಕಾಗಿ ಬೇರೆ ಕಡೆಗೆ ಸಾಗಣೆ ಮಾಡುವ ಉದ್ದೇಶದಿಂದ ನಗರಸಭೆ ಕ್ರೀಡಾಂಗಣದ ಸಮೀಪದ ಮಳಿಗೆಯೊಂದರಲ್ಲಿ 59 ಅಕ್ಕಿ ಚೀಲಗಳನ್ನು ದಾಸ್ತಾನು ಮಾಡಿದ್ದ.
ದಾಳಿ ನಡೆಸಿದ ತಂಡದಲ್ಲಿ ಆಹಾರ ನಿರೀಕ್ಷಕರಾದ ಸ್ಟೀವನ್ ಅಂಗಡಿ, ಎಂ.ಸಿ. ಮೇಗಳಮನಿ, ಆರ್.ಟಿ. ಸುರೇಶ ಹಾಗೂ ಆಹಾರ ಶಿರಸ್ತೇದಾರ ಎಂ.ಎಸ್.ಪಾಟೀಲ ಇದ್ದರು.
ಆರೋಪಿ ಪರಾರಿಯಾಗಿದ್ದು, ಈತನ ವಿರುದ್ಧ ರಾಣೆಬೆನ್ನೂರು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.