ಬ್ಯಾಡಗಿ: ತಾಲ್ಲೂಕಿನ ಅರಬಗೊಂಡದಲ್ಲಿ ಈಚೆಗೆ ನಡೆದ ಉಡಚಮ್ಮದೇವಿ ದೇವಸ್ಥಾನದ ಹುಂಡಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಇಲ್ಲಿಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಭದ್ರಾವತಿ ತಾಲ್ಲೂಕಿನ ಅರತೋಳಲು ಕೈಮರ ಗ್ರಾಮದ ಎಲ್. ಕಾಂತೇಶ ಮತ್ತು ಕೆ.ಭಾಗ್ಯಾ ಬಂಧಿತರು. ಎಸ್‌ಪಿ ಅಂಶುಕುಮಾರ ಮಾರ್ಗದರ್ಶನದಲ್ಲಿ ಸಿಪಿಐ ಮಹಾಂತೇಶ ಲಂಬಿ, ಪಿಎಸ್‌ಐಗಳಾದ ಮಂಜುನಾಥ ಕುಪ್ಪೇಲೂರ, ಎನ್.ಕೆ.ಲಿಂಗನಹಳ್ಳಿ ನೇತೃತ್ವದ ವಿಶೇಷ ತಂಡದಲ್ಲಿರುವ ಎಎಸ್‌ಐಗಳಾದ ಬಸವರಾಜ ಅಂಜುಟಗಿ, ಯು.ಬಿ.ನಂದಿಗೌಡ್ರ, ಕೇವಲ 20 ದಿನಗಳಲ್ಲಿ ಅರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.