ADVERTISEMENT

ಚಿಂಚೋಳಿ: ಕಾವಲುಗಾರನ ಮೇಲೆ ಹಲ್ಲೆ ಮಾಡಿ ₹ 20 ಲಕ್ಷ ಮೌಲ್ಯದ ಟೈರ್ ಕಳ್ಳತನ

​ಪ್ರಜಾವಾಣಿ ವಾರ್ತೆ
Published 23 ಜುಲೈ 2022, 7:57 IST
Last Updated 23 ಜುಲೈ 2022, 7:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿಂಚೋಳಿ (ಕಲಬುರಗಿ ಜಿಲ್ಲೆ): ಇಲ್ಲಿನ‌ ಪುರಸಭೆ ವ್ಯಾಪ್ತಿಯ ಚಂದಾಪುರದ ಮುಖ್ಯರಸ್ತೆಯಲ್ಲಿರುವ ಟೈರ್ ಶೋರೂಂನಲ್ಲಿ ಕಳ್ಳತನ ನಡೆಸಿದ ಘಟನೆ ಶನಿವಾರ ಬೆಳಗಿನ ಜಾವ ನಡೆದಿದೆ.

1 ಗಂಟೆ ಸುಮಾರಿಗೆ ಕಳ್ಳರು ಬಂದ ಶಬ್ದ ಕೇಳಿ ಕೆಳ ಮಹಡಿಯಲ್ಲಿದ್ದ ಕಾವಲುಗಾರ ಹೊರ ಬಂದಿದ್ದಾನೆ. ಆತನ ಮೇಲೆ ಹಲ್ಲೆ ನಡೆಸಿ, ಇಬ್ಬರು ಆತನನ್ನು ಹಿಡಿದುಕೊಂಡು ಉಳಿದವರು ಟೈರುಗಳನ್ನು ಹೊರ ಹಾಕಿ ಲಾರಿಯಲ್ಲಿ ಒಯ್ದಿದ್ದಾರೆ.

ಪ್ರಾಥಮಿಕ ಮಾಹಿತಿಯಂತೆ ಸುಮಾರು 60 ಟೈರ್ ಕಳ್ಳತನ‌ವಾಗಿವೆ. ಇದರಿಂದ ಶೋರೂಂ‌ ಮಾಲೀಕರಿಗೆ ₹ 20 ಲಕ್ಷ ನಷ್ಟ ಆಗಿರುವ ಅಂದಾಜಿದೆ. ಶೋರೂಂಗೆ ಸಿ.ಸಿ. ಕ್ಯಾಮೆರಾ ಅಳವಡಿಸಲಾಗಿದೆ ಆದರೆ ಅವುಗಳ ಮುಖವನ್ನು ಕಳ್ಳರು ತಿರುವಿದ್ದಾರೆ. ಸಿ.ಸಿ ಕ್ಯಾಮೆರಾದ ಸ್ಟೋರೇಜ್ ಡಿವಿಆರ್ ಉಪಕರಣವನ್ನು ಕಳ್ಳರು ಒಯ್ದಿದ್ದಾರೆ.

ADVERTISEMENT

ಕಾವಲುಗಾರನ ಸಮ್ಮುಖದಲ್ಲಿಯೇ ರಾತ್ರಿ ಕಳ್ಳತನ ನಡೆದಿದೆ. ಇದು ಮೂರನೇ ಕಳ್ಳತನವಾಗಿದೆ. ಮೊದಲ ಸಲ ₹ 3 ಲಕ್ಷದ ಕಳ್ಳಕನ ನಡೆದಿತ್ತು ಎರಡನೇ ಬಾರಿಗೆ ಯತ್ನ ನಡೆಸಿದರೂ ಟೈರ್ ಹೋಗಿರಲಿಲ್ಲ ಬರಿ ಯತ್ನ ನಡೆದಿತ್ತು. ಬೆರಳಚ್ಚು ತಜ್ಞರು, ಶ್ವಾನ ಬಂದರೂ ಪ್ರಯೋಜನವಾಗಿರಲಿಲ್ಲ. ಮೂರನೇ ಬಾರಿಗೆ ಭಾರಿ ಕಳ್ಳತನವಾಗಿದೆ. 6 ತಿಂಗಳಲ್ಲಿ‌ ಮೂರನೇ ಕಳ್ಳತನ ಇದಾಗಿದೆ.

ಟೈರ್ ಒಯ್ದ ಬಳಿಕ ಕಾವಲುಗಾರ ಮಾಲೀಕನ‌ ಮನೆಗೆ ಹೋಗಿ ವಿಷಯ ತಿಳಿಸಿದ್ದಾನೆ. ನಸುಕಿನ 4 ಗಂಟೆಗೆ ಪಿಎಸ್ಐ ಮಂಜುನಾಥರೆಡ್ಡಿ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.