ADVERTISEMENT

ಸಿಟಿಜೆನ್ ಕ್ಲಬ್‌ನಿಂದ ಅಸಹಾಯಕರಿಗೆ ಊಟ

​ಪ್ರಜಾವಾಣಿ ವಾರ್ತೆ
Published 1 ಜೂನ್ 2021, 1:10 IST
Last Updated 1 ಜೂನ್ 2021, 1:10 IST
ಶಹಾಬಾದ್‌ನಲ್ಲಿ ಆಹಾರದ ಪೊಟ್ಟಣಗಳನ್ನು ತಯಾರಿಸುವಲ್ಲಿ ನಿರತವಾಗಿರುವ ಸಿಟಿಜೆನ್ ಕ್ಲಬ್ ತಂಡದ ಸದಸ್ಯರು
ಶಹಾಬಾದ್‌ನಲ್ಲಿ ಆಹಾರದ ಪೊಟ್ಟಣಗಳನ್ನು ತಯಾರಿಸುವಲ್ಲಿ ನಿರತವಾಗಿರುವ ಸಿಟಿಜೆನ್ ಕ್ಲಬ್ ತಂಡದ ಸದಸ್ಯರು   

ಶಹಬಾದ್: ಲಾಕ್‌ಡೌನ್ ಆದ ದಿನದಿಂದಲೂ ನಗರದಲ್ಲಿರುವ ಬಡವರಿಗೆ, ನಿರಾಶ್ರಿತರಿಗೆ ಇಲ್ಲಿನಸಿಟಿಜೆನ್ ಕ್ಲಬ್ ತಂಡ ತಂಡದ ಸದಸ್ಯರು ಸಹಾಯಕ್ಕೆ ಧಾವಿಸಿದ್ದು, ಸದ್ದಿಲ್ಲದೆ ನಿತ್ಯ ನೂರಾರು ಜನರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.

10 ಜನರಿರುವ ಈ ತಂಡದಲ್ಲಿ ಪ್ರತಿಯೊಬ್ಬ ಸದಸ್ಯರು ತಮ್ಮ ಕೈಲಾದ ಹಣವನ್ನು ಕೂಡಿಸಿ ಅಗತ್ಯವಿರುವವರಿಗೆ ಸಹಾಯ ನೀಡುತ್ತಾ ಬಂದಿದ್ದಾರೆ. ಬಡವರಿಗೆ, ಕಾರ್ಮಿಕರಿಗೆ, ನಿರ್ಗತಿಕರಿಗೆ, ರೋಗಿಗಳ ಸಂಬಂಧಿಕರಿಗೆ ಊಟ, ಹಣ್ಣು -ಹಂಪಲು ಹಾಗೂ ಕುಡಿಯುವ ನೀರಿನ ಬಾಟಲ್ ನೀಡಿ ಹಸಿವು ನೀಗಿಸುವ ಕಾರ್ಯ ಮಾಡುತ್ತಿದ್ದಾರೆ.

ನಿತ್ಯ ₹500 ಕೆ.ಜಿ ಅಕ್ಕಿ ಬಳಸಿ ಪಲಾವ್, ಅನ್ನ ಸಾಂಬಾರ್ ತಯಾರಿಸಿ ಪೊಟ್ಟಣಗಳ ಮೂಲಕ ರೈಲು ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಕುಳಿತಿರುವ ಅಸಹಾಯಕರಿಗೆ ಹೋಗಿ ಆಹಾರ ವಿತರಣೆ ಮಾಡುತ್ತಿದ್ದಾರೆ. ಅಲ್ಲದೇ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಂಬೊ ಸಿಲಿಂಡರ್ ವಿತರಣೆ ಮಾಡಿದ್ದಾರೆ. ರೋಗಿಗಳಿಗೆ ಆಸ್ಪತ್ರೆಗೆ ತೆರಳುಲು ವಾಹನ ವ್ಯವಸ್ಥೆಯನ್ನೂ ಮಾಡಿಕೊಟ್ಟಿದ್ದಾರೆ. ವಿವಿಧೆಡೆ ಮಾಸ್ಕ್, ಸ್ಯಾನಿಟೈಸರ್ ವಿತರಣೆ ಮಾಡಿದ್ದಾರೆ.

ADVERTISEMENT

‘ಲಾಕ್‌ಡೌನ್‌ನಿಂದಾಗಿ ಬಡವರು, ನಿರ್ಗತಿಕರು ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಲಾಕ್‌ಡೌನ್ ಮುಗಿಯವರೆಗೂ ನಾವು ಆಹಾರದ ಪೊಟ್ಟಣಗಳನ್ನು ವಿತರಿಸಲಿದ್ದೇವೆ. ಇಂಥ ಸಂಕಷ್ಟ ಸಮಯದಲ್ಲಿ ನಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಬೇಕು ಎಂದು ನಿರ್ಧರಿಸಿ ಈ ಕಾರ್ಯ ಕೈಗೊಂಡಿದ್ದೇವೆ’ ಎನ್ನುತ್ತಾರೆ ಎಂದು ತಂಡದ ಸದಸ್ಯ ಮಹ್ಮದ್ ಅಜರ್.

ಅವರೊಂದಿಗೆ ಸಹರಾ ಇಬ್ರಾಹಿಂ ಸೇಠ, ಯಾಸೀನ್ ಚಿಟ್, ಜಮೀರ್ ಬೇಗ, ಮಹ್ಮದ್ ಇಶಾಕ್, ನೀರಜ್ ಶರ್ಮಾ, ವಾಜೀದ್ ಪಟೇಲ್, ಕರಮಾನ್ ಅನ್ಸಾರಿ, ಉಸ್ಮಾನ್, ಮಹ್ಮದ್ ಇರ್ಫಾನ್ ಅವರೂ ಕೈಜೋಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.