ADVERTISEMENT

ಕಮಲಾಪುರ: ₹ 23 ಸಾವಿರ ಮೌಲ್ಯದ ಮದ್ಯ ವಶ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2023, 13:23 IST
Last Updated 31 ಮಾರ್ಚ್ 2023, 13:23 IST
ಕಮಲಾಪುರ ತಾಲ್ಲೂಕಿನಲ್ಲಿ ಅಕ್ರಮ ಮದ್ಯ ಮಾರಾಟದಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸಿರುವ ಅಬಕಾರಿ ಪೊಲೀಸರು
ಕಮಲಾಪುರ ತಾಲ್ಲೂಕಿನಲ್ಲಿ ಅಕ್ರಮ ಮದ್ಯ ಮಾರಾಟದಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸಿರುವ ಅಬಕಾರಿ ಪೊಲೀಸರು   

ಕಲಬುರಗಿ: ಕಮಲಾಪುರ ಪಟ್ಟಣ ಹಾಗೂ ಮಹಾಗಾಂವ್ ಕ್ರಾಸ್‌ನಲ್ಲಿ ಇತ್ತೀಚೆಗೆ ದಾಳಿ ನಡೆಸಿದ ಅಬಕಾರಿ ಪೊಲೀಸರು ₹ 23,444 ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.

ಕಮಲಾಪುರ ಪಟ್ಟಣದಲ್ಲಿ ರಸ್ತೆ ಗಸ್ತು ಮಾಡುತ್ತಿರುವ ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿ ಶಾಂತಪ್ಪ ವೀರಭದ್ರಪ್ಪ ಎಂಬಾತ ಬ್ಲೆಂಡರ್ಸ್ ಪ್ರೈಡ್, ಇಂಪೀರಿಯಲ್ ಬ್ಲೂ, ಒಆರ್‌ಸಿ ಕಂಪನಿಗಳ 14.4 ಲೀಟರ್ ಮದ್ಯ ಹಾಗೂ 7.8 ಲೀಟರ್ ಬಿಯರ್ ಅಕ್ರಮವಾಗಿ ಹಳ್ಳಿಗಳಲ್ಲಿ ಮಾರಾಟಕ್ಕಾಗಿ ಸಾಗಾಣಿಕೆ ಮಾಡುತ್ತಿದ್ದ. ಈ ಸಂದರ್ಭದಲ್ಲಿ ಕಲಬುರಗಿ ವಲಯ 1ರ ಅಬಕಾರಿ ಉಪ ನಿರೀಕ್ಷಕ ಕೆ. ಪ್ರವೀಣ್ ಕುಮಾರ್ ₹ 9,620 ಮೌಲ್ಯದ ಮದ್ಯ ಹಾಗೂ ₹ 30 ಸಾವಿರ ಮೌಲ್ಯದ ಹೀರೊ ಸ್ಪ್ಲೆಂಡರ್ ಪ್ರೊ ಬೈಕ್ ಜಪ್ತಿ ಮಾಡಿದ್ದಾರೆ. ಕಾನ್‌ಸ್ಟೆಬಲ್‌ಗಳಾದ ಶಿವಪ್ಪ ಗೌಡ, ಮೋಹನ್, ಅರವಿಂದ್, ರಾಜೇಂದ್ರ ದಾಳಿ ತಂಡದಲ್ಲಿದ್ದರು.

ಕಮಲಾಪುರ ತಾಲ್ಲೂಕಿನ ಮಹಾಗಾಂವ ಕ್ರಾಸ್‌ನಲ್ಲಿ ಬಸವರಾಜ ಕಲ್ಯಾಣರಾವ ಎಂಬಾತ ಬೈಕ್‌ನಲ್ಲಿ ಒಆರ್‌ಸಿ ವಿಸ್ಕಿಯ 4 ಪೆಟ್ಟಿಗೆಯಂತೆ 34.56 ಲೀಟರ್ ಮದ್ಯವನ್ನು ಸಾಗಾಣಿಕೆ ಮಾಡುತ್ತಿರುವಾಗ ದಾಳಿ ಮಾಡಿದ ಕಲಬುರಗಿ ವಲಯ 1ರ ಅಬಕಾರಿ ನಿರೀಕ್ಷಕ ಸಿದ್ದರಾಮಪ್ಪ ತಾಳಿಕೋಟಿ ಅವರು ₹ 13,824 ಮೌಲ್ಯದ ಮದ್ಯ ಹಾಗೂ ₹ 30 ಸಾವಿರ ಮೌಲ್ಯದ ಬೈಕ್ ವಶಪಡಿಸಿಕೊಂಡರು.

ADVERTISEMENT

ಕಾನ್‌ಸ್ಟೆಬಲ್‌ಗಳಾದ ಶಿವಪ್ಪ ಗೌಡ, ಮೋಹನ್, ಅರವಿಂದ್, ರಾಜೇಂದ್ರ ದೋಳಿ ತಂಡದಲ್ಲಿದ್ದರು.

ಕಲಬುರಗಿ ವಿಭಾಗದ ಅಬಕಾರಿ ಜಂಟಿ ಆಯುಕ್ತ ಬಸವರಾಜ ಹಡಪದ ಅವರ ಮಾರ್ಗದರ್ಶನದಲ್ಲಿ ಈ ದಾಳಿಯನ್ನು ನಡೆಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.