ADVERTISEMENT

ಕಲಬುರಗಿ | ಮುಸ್ಲಿಮರಿಂದ ಶಿವಲಿಂಗಕ್ಕೆ ಪುಷ್ಪಾಲಂಕಾರ; ಗೋಮೂತ್ರದಿಂದ ಶುದ್ಧೀಕರಣ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 12:36 IST
Last Updated 16 ಫೆಬ್ರುವರಿ 2026, 12:36 IST
<div class="paragraphs"><p>ಹಿಂದೂ ಜಾಗೃತಿ ಸೇನೆ ಮುಖಂಡರು&nbsp;ಶಿವಲಿಂಗವನ್ನು ಗೋಮೂತ್ರದಿಂದ ‘ಶುದ್ಧೀಕರಣ’ ಮಾಡಿದರು.</p></div>

ಹಿಂದೂ ಜಾಗೃತಿ ಸೇನೆ ಮುಖಂಡರು ಶಿವಲಿಂಗವನ್ನು ಗೋಮೂತ್ರದಿಂದ ‘ಶುದ್ಧೀಕರಣ’ ಮಾಡಿದರು.

   

ಕಲಬುರಗಿ: ನಗರದ ಆಳಂದ ಚೆಕ್‌ಪೋಸ್ಟ್‌ನಲ್ಲಿರುವ ರಾಮತೀರ್ಥ ಮಂದಿರದ ಶಿವಲಿಂಗಕ್ಕೆ ಮುಸ್ಲಿಮರಿಂದ ಪುಷ್ಪಾಲಂಕಾರ ಮಾಡಿದ್ದನ್ನು ಖಂಡಿಸಿ ಹಿಂದೂ ಜಾಗೃತಿ ಸೇನೆ ಮುಖಂಡರು ಸೋಮವಾರ ಕ್ಷೀರಾಭಿಷೇಕ, ಜಲಾಭಿಷೇಕ, ಗೋಮೂತ್ರದಿಂದ ‘ಶುದ್ಧೀಕರಣ’ ಮಾಡಿದರು.

ಇತಿಹಾಸ ಪ್ರಸಿದ್ಧ ಶಿವಲಿಂಗವನ್ನು ಮಹಾಶಿವರಾತ್ರಿ ಅಂಗವಾಗಿ ‘ಅನ್ಯಕೋಮಿನ’ ಹಾಗೂ ‘ಗೋಮಾಂಸ ತಿನ್ನುವವರಿಂದ’ ಪುಷ್ಪಾಲಂಕಾರ ಮಾಡಿಸಿದ ವಿಡಿಯೊ ಭಾನುವಾರ ಹರಿದಾಡಿತ್ತು.

ADVERTISEMENT

ಈ ಬೆನ್ನಲ್ಲೆ ‘ಗೋವನ್ನು ತಾಯಿಯಾಗಿ ಪೂಜಿಸುವ ಧರ್ಮ ನಮ್ಮದು. ಆದರೆ, ಈ ದೇವಸ್ಥಾನದ ಟ್ರಸ್ಟ್‌ ಸದಸ್ಯರು ಗೋವು ಕಡಿದು ತಿನ್ನುವವರಿಂದ ಮಂದಿರದ ಗರ್ಭ ಗುಡಿಯೊಳಗೆ ಪುಷ್ಪಾಲಂಕಾರ ಮಾಡಿಸಿದ್ದಾರೆ. ಇದರಿಂದ ಐತಿಹಾಸಿಕ ಶಿವಲಿಂಗ ಅಪವಿತ್ರವಾಗಿದೆ’ ಎಂದು ಹಿಂದೂ ಜಾಗೃತಿ ಸೇನೆ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದರು.

‘ಅಪವಿತ್ರಗೊಂಡಿದ್ದ ಶಿವಲಿಂಗವನ್ನು ಗೋ ಮೂತ್ರ, ಗಂಗಾಜಲ ಹಾಗೂ ಕ್ಷಿರಾಭಿಷೇಕ ಮಾಡಿ ಶುದ್ಧೀಕರಿಸಲಾಯಿತು’ ಎಂದು ಮುಖಂಡ ಲಕ್ಷ್ಮಿಕಾಂತ ಸ್ವಾದಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.