ADVERTISEMENT

RSS ಪಥಸಂಚಲನಕ್ಕೆ ಅನುಮತಿ ನಿರಾಕರಣೆ: ಚಿತ್ತಾಪುರದಲ್ಲಿ ‘ಪೊಲೀಸ್’ ಪಥಸಂಚಲನ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 7:19 IST
Last Updated 19 ಅಕ್ಟೋಬರ್ 2025, 7:19 IST
<div class="paragraphs"><p>ಚಿತ್ತಾಪುರದಲ್ಲಿ ಪೊಲೀಸರು<strong>&nbsp;</strong>ಪಥಸಂಚಲನ ನಡೆಸಿದರು.</p></div>

ಚಿತ್ತಾಪುರದಲ್ಲಿ ಪೊಲೀಸರು ಪಥಸಂಚಲನ ನಡೆಸಿದರು.

   

ಚಿತ್ತಾಪುರ (ಕಲಬುರಗಿ ಜಿಲ್ಲೆ): ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಭಾನುವಾರ ಪಥಸಂಚಲನ ಆಯೋಜನೆಗೆ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಅನುಮತಿ ನೀಡಲು ನಿರಾಕರಿಸಿ ಅರ್ಜಿ ತಿರಸ್ಕರಿಸಿ ಆದೇಶ ಹೋರಾಡಿಸಿದ್ದರಿಂದ ಪೊಲೀಸರು ಬೆಳಿಗ್ಗೆ ಪಟ್ಟಣದಲ್ಲಿ ಪಥಸಂಚಲನ ನಡೆಸಿದರು.

ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆಗಳು ಮತ್ತು ಕಾನೂನು ಸುವ್ಯವಸ್ಥೆಗೆ ಭಂಗ ಹಾಗೂ ಶಾಂತಿಗೆ ಧಕ್ಕೆ ಆಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ 120 ಪೊಲೀಸರು, 10 ಸಬ್ ಇನ್‌ಸ್ಪೆಕ್ಟರ್, ಆರು ಸಿಪಿಐಗಳು ಬಂದೋಬಸ್ತ್‌ನಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಭಾನುವಾರ ನಡೆಸಲು ಉದ್ದೇಶಿಸಿದ ರಾಷ್ಟೀಯ ಸ್ವಯಂ ಸೇವಕರ ಪಥಸಂಚಲನಕ್ಕೆ ಹೈಕೋರ್ಟ್ ಅನುಮತಿ ನೀಡದೆ ಇರುವುದರಿಂದ ಸ್ವಯಂ ಸೇವಕರು ತೀವ್ರ ನಿರಾಶೆಗೆ ಒಳಗಾಗಿದ್ದಾರೆ. ನ್ಯಾಯಾಲಯ ಅನುಮತಿ ನೀಡುವ ದಿನದಂದೇ ಪಥಸಂಚಲನ ಮಾಡುತ್ತೇವೆ ಎಂದು ಸಂಘಟನೆಯ ಯುವ ವಕೀಲ ಪ್ರಸಾದ್ ಅವಟಿ ಹಾಗೂ ಬಿಜೆಪಿ ಕಾರ್ಯಕರ್ತ ಮಲ್ಲು ಇಂದೂರು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.