ADVERTISEMENT

ಕಲಬುರ್ಗಿ: ಪ್ಲಾಸ್ಮಾ ಥೆರಪಿಗೆ ಕೆಕೆಆರ್‌ಡಿಬಿಯಿಂದ ₹ 40 ಲಕ್ಷ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2020, 18:23 IST
Last Updated 17 ಆಗಸ್ಟ್ 2020, 18:23 IST
ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅವರು ಜಿಮ್ಸ್‌ ಅಧ್ಯಕ್ಷೆ ಡಾ. ಕವಿತಾ ಪಾಟೀಲ ಅವರಿಗೆ ಪ್ಲಾಸ್ಮಾ ಥೆರಪಿ ಉಪಕರಣಗಳ ಖರೀದಿಗೆ ₹ 40 ಲಕ್ಷದ ಮಂಜೂರಾತಿ ಪತ್ರ ನೀಡಿದರು
ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅವರು ಜಿಮ್ಸ್‌ ಅಧ್ಯಕ್ಷೆ ಡಾ. ಕವಿತಾ ಪಾಟೀಲ ಅವರಿಗೆ ಪ್ಲಾಸ್ಮಾ ಥೆರಪಿ ಉಪಕರಣಗಳ ಖರೀದಿಗೆ ₹ 40 ಲಕ್ಷದ ಮಂಜೂರಾತಿ ಪತ್ರ ನೀಡಿದರು   

ಕಲಬುರ್ಗಿ: ಇಲ್ಲಿನ ಜಿಮ್ಸ್‌ ಆಸ್ಪತ್ರೆಯಲ್ಲಿ ಕೋವಿಡ್‌–19 ತಡೆಗೆ ಪ್ಲಾಸ್ಮಾ ಥೆರಪಿ ಚಿಕಿತ್ಸಾ ವಿಧಾನ ಅಳವಡಿಸಿಕೊಳ್ಳಲು ಅಗತ್ಯ ಉಪಕರಣಗಳನ್ನು ಖರೀದಿಸಲು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯು (ಕೆಕೆಆರ್‌ಡಿಬಿ) ₹ 40 ಲಕ್ಷ ಬಿಡುಗಡೆ ಮಾಡಿದೆ.

ಸೋಮವಾರ ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅವರು ಜಿಮ್ಸ್‌ ನಿರ್ದೇಶಕಿ ಡಾ. ಕವಿತಾ ಪಾಟೀಲ ಅವರಿಗೆ ಮಂಜೂರಾತಿ ಪತ್ರ ಹಸ್ತಾಂತರಿಸಿದರು.

‘ಇಎಸ್‌ಐಸಿ ಆಸ್ಪತ್ರೆಯಲ್ಲಿ ಕೋವಿಡ್‌ ಲ್ಯಾಬ್ ಆರಂಭಕ್ಕೆ ₹ 54 ಲಕ್ಷ ಮೊತ್ತದ ಮಂಜೂರಾತಿ ನೀಡಲಾಗಿದೆ. ಮಂಡಳಿ ವ್ಯಾಪ್ತಿಯ 6 ಜಿಲ್ಲೆಗಳಲ್ಲಿ ಒಂಬತ್ತು ಅಡ್ವಾನ್ಸ್‌ ಲೈಫ್ ಸಪೋರ್ಟ್‌ (ಎಎಲ್‌ಎಸ್‌) ಆಂಬುಲೆನ್ಸ್‌ ಖರೀದಿಗೆ ₹ 4.50 ಕೋಟಿ ಮೀಸಲಿರಿಸಲಾಗುತ್ತಿದೆ’ ಎಂದು ದತ್ತಾತ್ರೇಯ ಪಾಟೀಲ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.