
ಚಿಂಚೋಳಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಚಿಮ್ಮನಚೋಡ ಬಳಿಯ ಸಿದ್ದಾಪುರ ತಾಂಡಾ ಬಳಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸೊಂದು ಕಂದಕಕ್ಕೆ ನಜಾರಿದ್ದು, ಅದೃಷ್ಟವಶಾತ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಕಾಳಗಿ ಬಸ್ ಘಟಕದ ಈ ಬಸ್ ಕಾಳಗಿ, ಕೋಡ್ಲಿ, ರುಮ್ಮನಗೂಡ, ಮೋಘಾ ದೋಟಿಕೊಳ ಮಾರ್ಗವಾಗಿ ಚಿಮ್ಮನಚೋಡ ತಲುಪಿ ಅಲ್ಲಿಂದ ಮನ್ನಾಎಖ್ಖೆಳ್ಳಿಗೆ ಹೊರಟಿತ್ತು.
ಬೆಳಿಗ್ಗೆ ಕಾಳಗಿಯಿಂದ ಬಸ್ ಚಿಮ್ಮನಚೋಡ ತಲುಪಿ ಅಲ್ಲಿಂದ ಮುಂದೆ ಸಾಗುವಾಗ ಸಿದ್ಧಾಪುರ ತಾಂಡಾ ಬಳಿ ಗುಡ್ಡದ ಡಾಂಬರ್ ರಸ್ತೆಯಲ್ಲಿ ಸಾಗುವ ಬದಲು ರಸ್ತೆ ಪಕ್ಕದ ಕಂದಕಕ್ಕೆ ಬಸ್ ನುಗ್ಗಿದೆ. ಆದರೆ, ಪ್ರಯಾಣಿಕರಿಗೆ ಏನು ಆಗಿಲ್ಲ. ಈ ಮೂಲಕ ಭಾರಿ ದುರಂತವೊಂದು ತಪ್ಪಿದಂತಾಗಿದೆ.
ಬಸ್ಸಿನಲ್ಲಿ 7/8 ಪ್ರಯಾಣಿಕರಿದ್ದರು. ಎಲ್ಲರೂ ಸುರಕ್ಷಿತವಾಗಿದ್ದಾರೆ. ಚಾಲಕ ದಿಲೀಪ ಹಾಗೂ ನಿರ್ವಾಹಕ ಸುರಕ್ಷಿತವಾಗಿದ್ದಾರೆ ಎಂದು ಶಿವರಾಮನಾಯಕ ತಾಂಡಾದ ಪ್ರಗತಿಪರ ರೈತ ತೇಜು ನಾಯಕ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.