
ಕಲಬುರಗಿ: ‘ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ವಿದೇಶಾಂಗ ನೀತಿ, ಹಿತಾಸಕ್ತಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಅಡ ಇಟ್ಟಿದ್ದಾರೆ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಂಗಳವಾರ ವಾಗ್ದಾಳಿ ನಡೆಸಿದರು.
ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ,‘ಸ್ವಾತಂತ್ರ್ಯದಿಂದ ಭಾರತವು ವಿದೇಶಾಂಗ ನೀತಿಯಲ್ಲಿ ಅಲಿಪ್ತ ನೀತಿ ಅನುಸರಿಸುತ್ತಿದೆ. ದೇಶದ ಈಗಿನ ವಿದೇಶಾಂಗ ನೀತಿಯೇ ಗೊತ್ತಾಗುತ್ತಿಲ್ಲ’ ಎಂದಿದ್ದಾರೆ.
‘ರಷ್ಯಾದಿಂದ ಕಚ್ಚಾ ತೈಲ ಆಮದಿಗೆ ಅಮೆರಿಕಕ್ಕೆ ಮನವಿ ಮಾಡಿಕೊಳ್ಳಬೇಕಾಗುತ್ತದೆ ಅಂತ ವಿದೇಶಾಂಗ ಸಚಿವಾಲಯ ಅಧಿಕಾರಿಗಳೇ ಹೇಳಿಕೆ ಕೊಟ್ಟಿದ್ದಾರೆ. ನಾವು ಯಾರಿಂದ ಖರೀದಿಸಬೇಕು, ವಹಿವಾಟು ನಡೆಸಬೇಕು ಎಂಬುದನ್ನು ಅಮೆರಿಕ ಕೇಳಿ ಮಾಡ್ಬೇಕಾ?’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಹಿಂದಿನ ಪ್ರಧಾನಿಗಳಾದ ಇಂದಿರಾ ಗಾಂಧಿ, ಮನಮೋಹನ್ ಸಿಂಗ್ ಅವರೆಲ್ಲ ಅಮೆರಿಕದ ಅಧ್ಯಕ್ಷರ ಎದುರೇ ಇರಾಕ್, ಇರಾನ್ ವಿರುದ್ಧದ ಅಮೆರಿಕ ದಾಳಿಗಳನ್ನು ಖಂಡಿಸುತ್ತಿದ್ದರು. ಪ್ರಧಾನಿ ಮೋದಿ ಅವರು ಟ್ರಂಪ್‌ಗೆ ಹೆದರುತ್ತಿದ್ದಾರೆ. ಏಕೆ ಅನ್ನೋದು ಗೊತ್ತಿಲ್ಲ?’ ಎಂದು ವ್ಯಂಗ್ಯವಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.