ADVERTISEMENT

ಆಳಂದ ಪಟ್ಟಣದಲ್ಲಿ ರಾಮನ ಭವ್ಯ ಮೂರ್ತಿ ‌ಮೆರವಣಿಗೆ: ಸಾವಿರ ಪೊಲೀಸರ ಪಹರೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2022, 9:16 IST
Last Updated 24 ಏಪ್ರಿಲ್ 2022, 9:16 IST
   

ಆಳಂದ (ಕಲಬುರಗಿ ಜಿಲ್ಲೆ): ರಾಮ ನವಮಿ ಅಂಗವಾಗಿ ಪಟ್ಟಣದಲ್ಲಿ ಶ್ರೀರಾಮಸೇನೆ ವತಿಯಿಂದ ಶ್ರೀರಾಮಚಂದ್ರನ 15 ಅಡಿ ಎತ್ತರದ ಮೂರ್ತಿಯ ಬೃಹತ್ ಮೆರವಣಿಗೆ ಆರಂಭವಾಗಿದೆ.

ಇತ್ತೀಚೆಗೆ ನಗರದಲ್ಲಿ ಬಿಜೆಪಿ ಹಾಗೂ ಶ್ರೀರಾಮಸೇನೆ ವತಿಯಿಂದ ಆಯೋಜಿಸಿದ್ದ ಮೆರವಣಿಗೆ ಸಂದರ್ಭದಲ್ಲಿ ಎರಡು ಕೋಮುಗಳ ಮಧ್ಯೆ ಘರ್ಷಣೆ ಸಂಭವಿಸುವ ಹಂತ ತಲುಪಿತ್ತು. ಅಂತಿಮವಾಗಿ ಪೊಲೀಸರ ಮಧ್ಯ ಪ್ರವೇಶದಿಂದಾಗಿ ದರ್ಗಾದಲ್ಲಿನ ಲಿಂಗಕ್ಕೆ ಪೂಜೆ ಸಲ್ಲಿಸಲು ಅವಕಾಶ ಸಿಕ್ಕಿತ್ತು.

ಹೀಗಾಗಿ ಇಂದು ನಡೆಯುತ್ತಿರುವ ಮೆರವಣಿಗೆಗೆ ಭಾರಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.

ADVERTISEMENT

ಖುದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ನೇತೃತ್ವದಲ್ಲಿ ಒಂದು ಸಾವಿರ ಪೊಲೀಸರ ಭದ್ರತೆ ಒದಗಿಸಲಾಗಿದೆ.

ಆರು ಕೆಎಸ್ಆರ್ ಪಿ ತುಕಡಿ, ಐದು ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಇಶಾ ಪಂತ್ 'ಪ್ರಜಾವಾಣಿ'ಗೆ ತಿಳಿಸಿದರು.

ಶ್ರೀರಾಮ ಮಾರ್ಕೆಟ್ ನಿಂದ ಆರಂಭವಾದ ಮೆರವಣಿಗೆ ಬಸ್ ನಿಲ್ದಾಣ, ತಹಶೀಲ್ದಾರ್ ಕಚೇರಿ ಮೂಲಕ ಮರಳಿ ಮಾರುಕಟ್ಟೆ ತಲುಪಲಿದೆ.

ಸಂಜೆ ಬಹಿರಂಗ ಸಭೆಗೆ ಸಿದ್ದತೆ ಮಾಡಿಕೊಂಡಿದ್ದರು. ಪೊಲೀಸರು ಅನುಮತಿ ನೀಡಿಲ್ಲ.

ಮೆರವಣಿಗೆಗೆ ಶಾಸಕ ಸುಭಾಷ್ ಗುತ್ತೇದಾರ ಚಾಲನೆ ನೀಡಿದರು‌. ಮೆರವಣಿಗೆಯಲ್ಲಿ ಭಾಗವಹಿಸುವ ಯುವಕರಿಗೆ ಶಾಂತಿಯುತವಾಗಿ ಭಾಗವಹಿಸಲು ಮನವಿ ಮಾಡಿದ್ದೇನೆ ಎಂದು ಗುತ್ತೇದಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.