ADVERTISEMENT

ಸೊನ್ನದಿಂದ‌ 5.85 ಲಕ್ಷ ಕ್ಯುಸೆಕ್ ನೀರು ಬಿಡುಗಡೆ: 148 ಗ್ರಾಮಗಳಿಗೆ ಪ್ರವಾಹ ಭೀತಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2020, 5:02 IST
Last Updated 16 ಅಕ್ಟೋಬರ್ 2020, 5:02 IST
ಕಲಬುರ್ಗಿ ತಾಲ್ಲೂಕಿನ ಸರಡಗಿ (ಬಿ) ಗ್ರಾಮವನ್ನು ಆವರಿಸಿಕೊಂಡ ನೀರು
ಕಲಬುರ್ಗಿ ತಾಲ್ಲೂಕಿನ ಸರಡಗಿ (ಬಿ) ಗ್ರಾಮವನ್ನು ಆವರಿಸಿಕೊಂಡ ನೀರು   
""
""

ಕಲಬುರ್ಗಿ: ಶುಕ್ರವಾರ ‌ಬೆಳಿಗ್ಗೆ ಅಫಜಲಪುರ ತಾಲ್ಲೂಕಿನ ಸೊನ್ನ ಭೀಮಾ ಬ್ಯಾರೇಜಿನಿಂದ 5.85 ಲಕ್ಷ ಕ್ಯುಸೆಕ್ ನೀರನ್ನು ಭೀಮಾ ನದಿಗೆ ಹರಿಸಲಾಗಿದೆ.

ಇದರಿಂದಾಗಿ ಜಿಲ್ಲೆಯ 148 ಗ್ರಾಮಗಳಲ್ಲಿ ಮುಳುಗಡೆ ಭೀತಿ ಎದುರಾಗಿದೆ.ಸಂಜೆ ವೇಳೆಗೆ 7.50 ಲಕ್ಷ ‌ಕ್ಯುಸೆಕ್ ನೀರು ಹೊರಬಿಡುವ ಸಾಧ್ಯತೆ ಇದೆ.

ಪ್ರವಾಹದಲ್ಲಿ ‌ಸಿಲುಕಿಕೊಂಡವರ ರಕ್ಷಣೆಗಾಗಿ ಎರಡು ಹೆಲಿಕಾಪ್ಟರ್ ಗಳು ಬೀದರ್ ವಾಯುನೆಲೆಗೆ ಬಂದಿಳಿಯಲಿವೆ. ಹೆಚ್ಚುವರಿ ಎಸ್ ಡಿ ಆರ್ಎಫ್ ತಂಡಗಳನ್ನು ಕರೆಸಿಕೊಳ್ಳಲಾಗುತ್ತಿದ್ದು, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಂದ ಬೋಟ್ ಹಾಗೂ ನುರಿತ ಈಜುಗಾರರನ್ನು ಕರೆಸಿಕೊಳ್ಳಲಾಗುತ್ತಿದೆ.

ADVERTISEMENT

ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ‌ಇಡೀ ರಾತ್ರಿ ಅಧಿಕಾರಿಗಳ ‌ಸಭೆ ನಡೆಸಿದ್ದು, ಎಲ್ಲ 148 ಗ್ರಾಮಗಳ ಸ್ಥಳಾಂತರ ಪ್ರಕ್ರಿಯೆ ಆರಂಭವಾಗಿದೆ.

ಕಲಬುರ್ಗಿ ಜಿಲ್ಲೆ ಕಾಳಗಿ ತಾಲ್ಲೂಕಿನ ಅರಣಕಲ್ ಗ್ರಾಮದ ಕೆರೆ ಭಾರಿ ಮಳೆಗೆ ಒಡೆದು ಹೋಗಿದೆ
ಕಲಬುರ್ಗಿ ಜಿಲ್ಲೆ ಕಾಳಗಿ ತಾಲ್ಲೂಕಿನ ಅರಣಕಲ್ ಗ್ರಾಮದ ಕೆರೆ ಭಾರಿ ಮಳೆಗೆ ಒಡೆದು ಹೋಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.