ADVERTISEMENT

ಮೆರವಣಿಗೆ: ಮಠಾಧೀಶರ ಭೇಟಿ

​ಪ್ರಜಾವಾಣಿ ವಾರ್ತೆ
Published 7 ಜೂನ್ 2022, 20:08 IST
Last Updated 7 ಜೂನ್ 2022, 20:08 IST
ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಸಮಿತಿಯ ಪದಾಧಿಕಾರಿಗಳು ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಸಮಾವೇಶದ ಬಗ್ಗೆ ಮಾಹಿತಿ ನೀಡಿದರು.
ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಸಮಿತಿಯ ಪದಾಧಿಕಾರಿಗಳು ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಸಮಾವೇಶದ ಬಗ್ಗೆ ಮಾಹಿತಿ ನೀಡಿದರು.   

ಬೆಂಗಳೂರು:ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಸಮಿತಿಯುನಾಡಗೀತೆ, ನಾಡಧ್ವಜಕ್ಕೆ ಅಪಮಾನ ಖಂಡಿಸಿ ಇದೇ 18 ರಂದು ನಗರದಲ್ಲಿ ಮೆರವಣಿಗೆ ಹಾಗೂ ಸಮಾವೇಶ ಹಮ್ಮಿಕೊಂಡಿದೆ. ಈ ಸಂಬಂಧ ಸಮಿತಿಯ ಪದಾಧಿಕಾರಿಗಳು ಮಠಾಧೀಶರನ್ನು ಮಂಗಳವಾರ ಭೇಟಿ ಮಾಡಿದರು.

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂನಂಜಾವಧೂತ ಸ್ವಾಮೀಜಿ ಅವರನ್ನು ಭೇಟಿ ಮಾಡಿದ ಸಮಿತಿಯ ಪದಾಧಿಕಾರಿಗಳು, ಸಮಾವೇಶದ ಬಗ್ಗೆ ಮಾಹಿತಿ ನೀಡಿದರು.

‘ನಾಡಗೀತೆ, ನಾಡಧ್ವಜಕ್ಕೆ ಅವಮಾನ ಮಾಡಿ, ಪಠ್ಯಪುಸ್ತಕ ಗಳಲ್ಲಿ ಕುವೆಂಪು, ನಾರಾಯಣ ಗುರು, ಅಂಬೇಡ್ಕರ್, ಬಸವಣ್ಣ ಮುಂತಾದ ಮಹಾತ್ಮರ ವಿಷಯ ಗಳನ್ನು ತಿರುಚಿ, ಉದ್ಧಟತನ ಮೆರೆಯುತ್ತಿರುವ ವ್ಯಕ್ತಿಗಳು, ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ’ ಎಂದು ಪದಾಧಿಕಾರಿಗಳು ತಿಳಿಸಿದರು.

ADVERTISEMENT

ಸಮಿತಿಯ ಪದಾಧಿಕಾರಿಗಳಾದಜಿ.ಬಿ. ಪಾಟೀಲ್, ಬಿ.ಟಿ. ಲಲಿತಾ ನಾಯಕ್, ಜಾಣಗೆರೆ ವೆಂಕಟರಾಮಯ್ಯ, ನಾಗರಾಜ್, ಶ್ರೀನಿವಾಸ ಜಿ. ಕಪ್ಪಣ್ಣ, ಹ.ರಾ. ಮಹೇಶ್, ಕೆ.ಎಚ್. ಕುಮಾರ್, ಎ.ಪಿ. ರಂಗನಾಥ್, ಎನ್.ಜಿ. ರಾಮಚಂದ್ರ, ಗೋವಿಂದಸ್ವಾಮಿ, ಎಲ್.ಎನ್. ಮುಕುಂದರಾಜ್ ಮತ್ತಿತರರು ನಿಯೋಗದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.