ADVERTISEMENT

ಕೊಡಗು: ಕ್ರೀಡಾ ತರಬೇತಿ ವಸತಿ ನಿಲಯ ಸ್ಥಾಪನೆಗೆ ಭೂಮಿ ಪರಿಶೀಲಿಸಿದ ಅಜಯ್ ಮಾಕನ್

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 6:52 IST
Last Updated 15 ಸೆಪ್ಟೆಂಬರ್ 2025, 6:52 IST
   

ಮಡಿಕೇರಿ: ಉನ್ನತ ಮಟ್ಟದ ಕ್ರೀಡಾ ತರಬೇತಿ ವಸತಿ ನಿಲಯ ಸ್ಥಾಪನೆಗಾಗಿ ನಿಗದಿ ಮಾಡಿರುವ ವಿ. ಬಾಡಗ ಗ್ರಾಮದಲ್ಲಿನ ಸ್ಥಳವನ್ನು ರಾಜ್ಯಸಭಾ ಸದಸ್ಯ ಅಜಯ್ ಮಾಕನ್ ಹಾಗೂ ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ ಸೋಮವಾರ ಪರಿಶೀಲಿಸಿದರು.

ಈ ವೇಳೆ ಮಾತನಾಡಿದ ಪೊನ್ನಣ್ಣ, ಈ ಸ್ಥಳದಲ್ಲಿ ಉನ್ನತ ಮಟ್ಟದ ತರಬೇತಿ ವಸತಿ ನಿಲಯ ಸ್ಥಾಪಿಸಿದಲ್ಲಿ ರಾಜ್ಯದ ಹಾಗೂ ಕೊಡಗಿನ ಕ್ರೀಡಾಪಟುಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಈ ಹಿಂದೆ ರಾಜ್ಯಸಭಾ ಸದಸ್ಯ ಅಜಯ್ ಮಾಕನ್ ಅವರಲ್ಲಿ ಈ ಕುರಿತು ಮನವಿ ಮಾಡಲಾಗಿತ್ತು. ಸಕಾರಾತ್ಮಕವಾಗಿ ಸ್ಪಂದಿಸಿದ ಅವರು ಇಂದು 11 ಎಕರೆ ಭೂಮಿಯನ್ನು ವೀಕ್ಷಣೆ ಮಾಡಿದ್ದಾರೆ. ಜೊತೆಗೆ ಅನುದಾನ ನೀಡುವ ಭರವಸೆಯನ್ನೂ ನೀಡಿದ್ದಾರೆ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.