ADVERTISEMENT

ಮಡಿಕೇರಿ: ‘ಶೇಡ್ ಕಾಫಿ’ ಸವಿದ ಡೆಪ್ಯೂಟಿ ಕೌನ್ಸಿಲ್ ಜನರಲ್‌

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 2:52 IST
Last Updated 10 ಜುಲೈ 2025, 2:52 IST
<div class="paragraphs"><p>ಕಾಫಿ</p></div>

ಕಾಫಿ

   

ಮಡಿಕೇರಿ: ಆಸ್ಟ್ರೇಲಿಯಾದ ಡೆಪ್ಯೂಟಿ ಕೌನ್ಸಿಲ್ ಜನರಲ್‌ ಸ್ಟೀವನ್ ಕನೋಲಿ ಮತ್ತು ಸ್ಟೆಫಿ ಚೆರಿಯನ್ ಅವರಿಗೆ ಕೊಡಗಿನ ‘ಶೇಡ್ ಕಾಫಿ’ಯನ್ನು ಪರಿಚಯಿಸಲಾಯಿತು.

ಇಲ್ಲಿ ಈಚೆಗೆ ಬಯೋಟ ಕೂರ್ಗ್ ಫಾರ್ಮಿಂಗ್ ಪ್ರೊಡ್ಯೂಸರ್ ಕಂಪೆನಿ ವತಿಯಿಂದ ನಡೆದ ಕಾಫಿ ಕಪ್ ಟೇಸ್ಟ್ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರಿಗೆ ಕೇವಲ ‘ಶೇಡ್ ಕಾಫಿ’ಯನ್ನು ಪರಿಚಯಿಸಿದ್ದು ಮಾತ್ರವಲ್ಲ, ಕೊಡಗಿನ ಕಾಫಿ ತೋಟಗಳನ್ನು ತೋರಿಸಿ, ಅಲ್ಲಿ ಶೇಡ್ ಕಾಫಿಯನ್ನು ಉತ್ಪಾದಿಸುವ ವಿಧಾನಗಳ ಬಗ್ಗೆ ಮಾಹಿತಿಯನ್ನೂ ನೀಡಲಾಯಿತು.

ADVERTISEMENT

ಇದು ಕೊಡಗಿನ ಕಾಫಿಗೆ ಆಸ್ಟ್ರೇಲಿಯಾದಲ್ಲಿ ಮಾರುಕಟ್ಟೆಯನ್ನು ಪ‍ಡೆಯುವುದಕ್ಕೆ ಸಹಕಾರಿಯಾಗಲಿದೆ. ‘ಕೊಡಗು ಕಾಫಿ’ಯನ್ನು ಆಸ್ಟೇಲಿಯಾದಲ್ಲಿ ಪ್ರಚುರಪಡಿಸುವುದಕ್ಕೆ ಮತ್ತು ಮಾರುಕಟ್ಟೆಗೆ ಒಳಪಡಿಸುವುದಕ್ಕೆ ಪೂರಕವಾದ ವ್ಯವಸ್ಥೆಯನ್ನು ರೂಪಿಸಿಕೊಡುವಂತೆ ಇದೇ ಸಂದರ್ಭದಲ್ಲಿ ವಿನಂತಿಸಿಕೊಳ್ಳಲಾಯಿತು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.