
ಪ್ರಜಾವಾಣಿ ವಾರ್ತೆ
ಕೊಡಗಿನ ವೀರಾಜಪೇಟೆ ತಾಲ್ಲೂಕಿನ ಕೆ. ಬೈಗೋಡು ಗ್ರಾಮದಲ್ಲಿ ಬೃಹತ್ ತೊಟ್ಟಿಯೊಳಗೆ ಬಿದ್ದ ಆನೆ ಮೇಲಕ್ಕೆ ಹತ್ತುವ ಯತ್ನ
ಪ್ರಜಾವಾಣಿ ಚಿತ್ರ
ಮಡಿಕೇರಿ: ವಿರಾಜಪೇಟೆ ತಾಲ್ಲೂಕು ಕೆ.ಬೈಗೋಡು ಗ್ರಾಮದ ಎಚ್.ಎ.ಗಣೇಶ್ ಅವರ ಮನೆ ಬಳಿ ಗುಂಡಿಗೆ ಕಾಡಾನೆಯೊಂದು ಆಕಸ್ಮಿಕವಾಗಿ ಬಿದ್ದು ಹೊರಬರಲಾರದೆ ಪರದಾಡುತ್ತಿತ್ತು.
ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಜೆಸಿಬಿ ಮೂಲಕ ಮಣ್ಣು ತೆಗೆದು ಆನೆ ಹೊರಬರಲು ಸಹಕರಿಸಿದರು. ನಂತರ ಆನೆಯನ್ನು ಅಯ್ಯಪ್ಪ ದೇವರ ಕಾಡಿಗೆ ಓಡಿಸಲಾಯಿತು.
ಈ ಕಾರ್ಯಾಚರಣೆಯಲ್ಲಿ ಡಿಸಿಎಫ್ ಜಗನ್ನಾಥ್, ಎಸಿಎಫ್ ನೆಹರೂ, ಆರ್ ಎಫ್ ಒ ದೇವಯ್ಯ, ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.