ADVERTISEMENT

ಅಶೋಕಪುರ; ಗಣೇಶ ಮೂರ್ತಿ ವಿಸರ್ಜನೋತ್ಸವಕ್ಕೆ ಜನಸಾಗರ

ಅದ್ಭುತ ಕಲಾಪ್ರದರ್ಶನ, ರಾತ್ರಿ ಇಡೀ ನಡೆದ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 17:26 IST
Last Updated 14 ಸೆಪ್ಟೆಂಬರ್ 2025, 17:26 IST
<div class="paragraphs"><p>ಮಡಿಕೇರಿಯ ಅಶೋಕಪುರದ ಶ್ರೀ ಗಣಪತಿ ಉತ್ಸವ ಸಮಿತಿ ಪ್ರತಿಷ್ಠಾಪಿಸಿದ್ದ ಗೌರಿ, ಗಣೇಶ ಮೂರ್ತಿಗಳ ವಿಸರ್ಜನೋತ್ಸವ ಭಾನುವಾರ ಅದ್ದೂರಿಯಾಗಿ ನೆರವೇರಿತು&nbsp;&nbsp;</p></div>

ಮಡಿಕೇರಿಯ ಅಶೋಕಪುರದ ಶ್ರೀ ಗಣಪತಿ ಉತ್ಸವ ಸಮಿತಿ ಪ್ರತಿಷ್ಠಾಪಿಸಿದ್ದ ಗೌರಿ, ಗಣೇಶ ಮೂರ್ತಿಗಳ ವಿಸರ್ಜನೋತ್ಸವ ಭಾನುವಾರ ಅದ್ದೂರಿಯಾಗಿ ನೆರವೇರಿತು  

   

ಪ್ರಜಾವಾಣಿ ಚಿತ್ರ/ರಂಗಸ್ವಾಮಿ

ಮಡಿಕೇರಿ: ಇಲ್ಲಿನ ಅಶೋಕಪುರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ, ಗಣೇಶ ಮೂರ್ತಿಗಳ ವಿಸರ್ಜನೋತ್ಸವದ ಮೆರವಣಿಗೆಯು ಅದ್ದೂರಿಯಾಗಿ ಭಾನುವಾರ ರಾತ್ರಿ ನಗರದಲ್ಲಿ ನಡೆಯಿತು.

ADVERTISEMENT

ಅಶೋಕಪುರ ಗಣೇಶ ಉತ್ಸವ ಸಮಿತಿ ವತಿಯಿಂದ ನಡೆದ ಭವ್ಯ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಭಾರಿ ಜನಸ್ತೋಮ ಸೇರಿತ್ತು. ನಗರದಲ್ಲಿ ಸಂಭ್ರಮ ಉಂಟು ಮಾಡಿತು. ಚಲನವಲನಗಳಿಂದ ಕೂಡಿದ್ದ ವೈಭವೋಪೇತ ಮಂಟಪದ ಅದ್ಭುತ ಪ್ರದರ್ಶನವನ್ನು ನಗರದ ಅಲ್ಲಲ್ಲಿ ಜನರು ಕಣ್ತುಂಬಿ ಕೊಂಡರು.

ಈ ಬಾರಿ ಪ್ರದರ್ಶನಕ್ಕೆ ‘ಗಣಪತಿಯಿಂದ ಸಿಂಧೂರಾಸುರ ವಧೆ’ ಪ್ರಸಂಗವನ್ನು ಆಯ್ದುಕೊಳ್ಳಲಾಗಿತ್ತು. ಗಣಪತಿಯ ಶೌರ್ಯ ಪ್ರದರ್ಶನ ಕಣ್ಣಿಗೆ ಕಟ್ಟುವಂತೆ ಮೂಡಿಬಂತು. ಒಟ್ಟು 14 ಕಲಾಕೃತಿಗಳು ಪ್ರದರ್ಶನದಲ್ಲಿದ್ದವು. ಈ ಎಲ್ಲ ಕಲಾಕೃತಿಗಳ ಪ್ರದರ್ಶನಗಳು ಜನಮನವನ್ನು ಸೂರೆಗೊಂಡವು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತ (ಸುದರ್ಶನ ವೃತ್ತ), ಕೆಎಸ್‌ಆರ್‌ಟಿಸಿ ಬಸ್‌ಡಿಪೊ, ಜನರಲ್ ತಿಮ್ಮಯ್ಯ ವೃತ್ತ, ಹಳೆಯ ಖಾಸಗಿ ಬಸ್‌ನಿಲ್ದಾಣ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಮಂಟಪದ ಮೆರವಣಿಗೆ ನಡೆಯಿತು.

ಮಡಿಕೇರಿಯ ಅಶೋಕಪುರ ಶ್ರೀ ಗಣಪತಿ ಉತ್ಸವ ಸಮಿತಿ ಪ್ರತಿಷ್ಠಾಪಿಸಿದ್ದ ಗೌರಿ ಗಣೇಶ ಮೂರ್ತಿಗಳ ವಿಸರ್ಜನೋತ್ಸವದ ಮೆರವಣಿಗೆಯಲ್ಲಿ ಭಾನುವಾರ ಅಪಾರ ಜನಸ್ತೋಮ ಭಾಗಿಯಾಗಿತ್ತು    ಪ್ರಜಾವಾಣಿ ಚಿತ್ರ/ರಂಗಸ್ವಾಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.