ADVERTISEMENT

ಮಡಿಕೇರಿ: ಸಮಗ್ರ ಕೃಷಿಯಲ್ಲಿ ಯಶಸ್ಸು ಕಂಡ ಎಂಬಿಎ ಪದವೀಧರ

ಮಾಯಾಮುಡಿಯಲ್ಲೊಂದು ಮಾಯದಂತಹ ಆರ್ಕೀಡ್ ಲೋಕ ಸೃಷ್ಟಿಸಿದ ಸಾಧಕ

ಕೆ.ಎಸ್.ಗಿರೀಶ್
Published 2 ಮೇ 2025, 5:15 IST
Last Updated 2 ಮೇ 2025, 5:15 IST
ಚೆಪ್ಪುಡೀರ ಸುಬ್ಬಯ್ಯ
ಚೆಪ್ಪುಡೀರ ಸುಬ್ಬಯ್ಯ   

ಮಡಿಕೇರಿ: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಮಾಯಾಮುಡಿಯಲ್ಲಿ ಮಾಯದಂತಹ ಲೋಕ ನಿರ್ಮಿಸಿದವರು ಚೆಪ್ಪುಡೀರ ಸುಬ್ಬಯ್ಯ. ಇವರ ಬಳಿ ಬಗೆಬಗೆ ತಳಿಯ ಆರ್ಕಿಡ್ ಸಸ್ಯಗಳಿವೆ.  ಸ್ವತಃ ಬೆಳೆದು ಸಸಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಅವುಗಳಲ್ಲಿ ವಿದೇಶಿ ತಳಿಗಳೂ ಇದ್ದು, ಆರ್ಕಿಡ್ ಪ್ರಿಯರಿಗೆ ಇವರ ಸಸ್ಯಾಗಾರ ಅಚ್ಚುಮೆಚ್ಚಿನ ತಾಣವಾಗಿದೆ.

ಕೊಡಗಿನಲ್ಲಿ ಸ್ವತಃ ಆರ್ಕಿಡ್ ಗಿಡಗಳನ್ನು ಬೆಳೆದು ಹೂವು ಸಮೇತ ಮಾರಾಟ ಮಾಡುತ್ತಿರುವ ಅತಿ ವಿರಳ ಮಂದಿಯಲ್ಲಿ ಇವರೂ ಒಬ್ಬರು.

ಹಾಲೆಂಡ್‌ನಿಂದ ಗಿಡಗಳನ್ನು ತರಿಸಿ ಅದನ್ನು ಸ್ಥಳೀಯವಾಗಿ  ತಾವೇ  ಬೆಳೆಸಿ ಮಾರಾಟ ಮಾಡುತ್ತಿರುವುದು ವಿಶೇಷ. ಡೆಂಡ್ರೋಬಿಯಂ, ಆನ್ಸಿಡಿಯಂ, ವ್ಯಾಂಡಾ, ಕೆಟ್ಲಿಯಾ ಸೇರಿದಂತೆ ಹಲವು ಆರ್ಕಿಡ್ ಪ್ರಬೇಧಗಳು ಇವರ ಬಳಿ ಇವೆ. ಕೇವಲ ಆರ್ಕಿಡ್ ಮಾತ್ರವಲ್ಲ, ಇವರ ಬಳಿ ಆಂಥೋರಿಯಂ ತೆರನಾದ ಒಳಾಂಗಣ ಆಲಂಕಾರಿಕ ಸಸ್ಯಗಳೂ ಇವರ ಬಳಿ ಇವೆ.

ADVERTISEMENT

ಇವರ ಬಳಿ ಕಾಫಿ ಮಂಡಳಿ ನೀಡುವ ಬೀಜಗಳಿಂದ ತಯಾರಿಸಿದ ಕಾಫಿ ಗಿಡಗಳ ನರ್ಸರಿಯೂ ಇದೆ. ವಿಯಟ್ನಾಂ ತಳಿ ಟಿಆರ್– 9 ಮತ್ತು 11, ಸೆಲೆಕ್ಷನ್ 274, ಸಿxಆರ್‌ ಸೇರಿದಂತೆ ಹಲವು ವೈವಿಧ್ಯಮಯ ಕಾಫಿ ತಳಿಗಳ ಸಸ್ಯಗಳು ಇವರ ಬಳಿ ಲಭ್ಯ.

ಅಂದ ಹಾಗೆ, ಇವರು ಓದಿದ್ದು ಎಂಬಿಎ. ಬೆಂಗಳೂರಿನಲ್ಲಿ 3 ವರ್ಷ ಕೆಲಸ ಮಾಡಿ, ಕೃಷಿಯಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ವಾಪಸ್ ಊರಿಗೆ ಬಂದರು. 12 ವರ್ಷದಿಂದ ಕಾಫಿ, ಕಾಳುಮೆಣಸು, ಅಡಿಕೆ ಹಾಗೂ ಭತ್ತವನ್ನು ಬೆಳೆಯುವ ಮೂಲಕ ಸಮಗ್ರ ಕೃಷಿಯಲ್ಲಿ ತೊಡಗಿಸಿಕೊಂಡರು.  5 ವರ್ಷದಿಂದ ಈಚೆಗೆ ಸಸ್ಯಾಗಾರ ಆರಂಭಿಸಿದರು. 3 ವರ್ಷದಿಂದ ಈಚೆಗೆ ಕಾಫಿ ಸಸ್ಯಾಗಾರ ಶುರು ಮಾಡಿ ಯಶಸ್ಸು ಪಡೆದಿದ್ದಾರೆ.

ಇವರ ಬಳಿ ಕನಿಷ್ಠ ₹ 150 ರಿಂದ ಆರಂಭಿಸಿ, ಗರಿಷ್ಠ ₹ 4 ಸಾವಿರದವರೆಗೆ ಆರ್ಕಿಡ್‌ ಗಿಡಗಳು ಸಿಗುತ್ತವೆ. ಗಿಡಗಳ ವಯಸ್ಸು, ಅವುಗಳ ಪ್ರಬೇಧದ ಆಧಾರದ ಮೇಲೆ ಬೆಲೆ ನಿರ್ಧಾರಿತವಾಗುತ್ತದೆ ಎಂದು ಚೆಪ್ಪುಡೀರ ಸುಬ್ಬಯ್ಯ ಹೇಳುತ್ತಾರೆ.

ಇವರ ಸಮಗ್ರ ಕೃಷಿಯನ್ನು ಮೆಚ್ಚಿದ ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಜಿಲ್ಲಾಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಸಿಕ್ಕಿದೆ.

ಈಚೆಗೆ ಚೆಪ್ಪುಡೀರ ಸುಬ್ಬಯ್ಯ ಅವರ ಸಸ್ಯಾಗಾರಕ್ಕೆ ಕೃಷಿ ಇಲಾಖೆ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು
ಚೆಪ್ಪುಡೀರ ಸುಬ್ಬಯ್ಯ ಅವರ ಸಸ್ಯಾಗಾರದಲ್ಲಿರುವ ಬಗೆಬಗೆ ಆರ್ಕಿಡ್ ಸಸ್ಯಗಳು
ಚೆಪ್ಪುಡೀರ ಸುಬ್ಬಯ್ಯ ಅವರ ಸಸ್ಯಾಗಾರದಲ್ಲಿರುವ ಬಗೆಬಗೆ ಆರ್ಕಿಡ್ ಸಸ್ಯಗಳು
ಚೆಪ್ಪುಡೀರ ಸುಬ್ಬಯ್ಯ ಅವರ ಸಸ್ಯಾಗಾರದಲ್ಲಿರುವ ಬಗೆಬಗೆ ಆರ್ಕಿಡ್ ಸಸ್ಯಗಳು
ಚೆಪ್ಪುಡೀರ ಸುಬ್ಬಯ್ಯ ಅವರ ಸಸ್ಯಾಗಾರದಲ್ಲಿರುವ ಬಗೆಬಗೆ ಆರ್ಕಿಡ್ ಸಸ್ಯಗಳು
ಚೆಪ್ಪುಡೀರ ಸುಬ್ಬಯ್ಯ ಅವರ ಸಸ್ಯಾಗಾರದಲ್ಲಿರುವ ಬಗೆಬಗೆ ಆರ್ಕಿಡ್ ಸಸ್ಯಗಳು
ಚೆಪ್ಪುಡೀರ ಸುಬ್ಬಯ್ಯ ಅವರ ಸಸ್ಯಾಗಾರದಲ್ಲಿರುವ ಬಗೆಬಗೆ ಆರ್ಕಿಡ್ ಸಸ್ಯಗಳು
ಮೈತ್ರಿ
ಬಗೆಬಗೆಯ ಆರ್ಕೀಡ್ ಸಸ್ಯಗಳಿ ಇವರ ಬಳಿ ಲಭ್ಯ ಕಾಫಿ, ಕಾಳು ಮೆಣಸು, ಅಡಿಕೆ, ಭತ್ತ ಬೆಳೆಯುವ ರೈತ ಜಿಲ್ಲಾಮಟ್ಟದ ಕೃಷಿಕ ಪ್ರಶಸ್ತಿ ಪ‍ಡೆದ ಸಾಧಕ
ಕೊಡಗಿನಲ್ಲೇ ಅತಿ ವಿರಳ ಆರ್ಕಿಡ್ ಸಸ್ಯಾಗಾರವನ್ನು ಚೆಪ್ಪುಡೀರ ಸುಬ್ಬಯ್ಯ ಮಾಡಿದ್ದು ಸಮಗ್ರ ಕೃಷಿ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಇವರನ್ನು ಆತ್ಮ ಯೋಜನೆಯಡಿ ಗುರುತಿಸಲಾಗಿದೆ
ಮೈತ್ರಿ ಕೃಷಿ ಇಲಾಖೆಯ ಆತ್ಮ ಯೋಜನೆಯ ಉಪ ಯೋಜನಾಧಿಕಾರಿ.

ತಜ್ಞರ ಸಲಹೆ ಮಾರ್ಗದರ್ಶನ ಕಾರಣ

ಸಮಗ್ರ ಕೃಷಿ ಪದ್ಧತಿಯ ಅನುಸರಿಸಲು ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ತಜ್ಞರು ನೀಡಿದ ತರಬೇತಿ ಮಾರ್ಗದರ್ಶನ ಕಾರಣ ಎಂದು ಚೆಪ್ಪುಡೀರ ಸುಬ್ಬಯ್ಯ ಹೇಳುತ್ತಾರೆ. ‘ಎಂಬಿಎ ಪದವಿ ಪಡೆದರೂ ನಾನು ಕೃಷಿಯಲ್ಲೇ ಖುಷಿ ಕಂಡೆ. ಒಂದೇ ಬೆಳೆ  ವಿಧಾನವನ್ನು ಅನಸರಿಸದೆ ಸಮಗ್ರ ಕೃಷಿ ಕ್ರಮ ಅನುಸರಿಸಬೇಕು ಕೃಷಿಗೆ ಸಂಬಂಧಿಸಿದ ಉಪಕಸುಬುಗಳನ್ನು ಮಾಡಬೇಕು. ಆಗ ಕೃಷಿ ನಿಜವಾಗಿಯೂ ಲಾಭದಾಯಕವಾಗಿರುತ್ತದೆ’ ಎಂದು ಅವರು ತಿಳಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.