ADVERTISEMENT

ಕೊಡಗು ಮಕ್ಕಿಶಾಸ್ತಾವು ದೇವಸ್ಥಾನದಲ್ಲಿ ಹರಕೆಯ ನಾಯಿಮೂರ್ತಿಗಳ ಸಲ್ಲಿಕೆಗೆ ಸಿದ್ಧತೆ

ಡಿ. 18 ಮತ್ತು 19ರಂದು ದೇವಾಲಯದ ವಾರ್ಷಿಕ ಉತ್ಸವ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2022, 6:01 IST
Last Updated 16 ಡಿಸೆಂಬರ್ 2022, 6:01 IST
ಇಲ್ಲಿಯವರೆಗೆ ಸಲ್ಲಿಕೆಯಾಗಿರುವ ಹರಕೆಯ ನಾಯಿ ಮೂರ್ತಿಗಳು
ಇಲ್ಲಿಯವರೆಗೆ ಸಲ್ಲಿಕೆಯಾಗಿರುವ ಹರಕೆಯ ನಾಯಿ ಮೂರ್ತಿಗಳು   

ನಾಪೋಕ್ಲು (ಕೊಡಗು ಜಿಲ್ಲೆ): ಸಮೀಪದ ಬೇತು ಗ್ರಾಮದ ಮಕ್ಕಿಶಾಸ್ತಾವು ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಹರಕೆಯ ಮಣ್ಣಿನ ನಾಯಿಮೂರ್ತಿಗಳನ್ನು ಸಲ್ಲಿಸುವ ಕಾರ್ಯ ನಡೆಯಲಿದೆ‌.

ಹಲವು ವರ್ಷಗಳಿಂದ ಇಲ್ಲಿನ ದೇವಾಲಯದಲ್ಲಿ ಈ ಸಂಪ್ರದಾಯವನ್ನು ಆಚರಿಸಲಾಗುತ್ತಿದ್ದು, ಈ ವರ್ಷವೂ ಸಿದ್ಧತೆ ನಡೆದಿದೆ. ಡಿ. 18 ಮತ್ತು 19ರಂದು ದೇವಾಲಯದ ವಾರ್ಷಿಕ ಉತ್ಸವ ನಡೆಯಲಿದೆ.

ಅದಕ್ಕೂ ಮುನ್ನ ಶುಕ್ರವಾರ ಸಂಕ್ರಮಣದ ದಿನ ಹರಕೆಯ ಮೂರ್ತಿಗಳನ್ನು ಒಪ್ಪಿಸಲಾಗುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.