ADVERTISEMENT

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ: 6 ಮಂದಿಗೆ ವಾರ್ಷಿಕ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2025, 23:30 IST
Last Updated 15 ಮಾರ್ಚ್ 2025, 23:30 IST
ಚೀಯಕಪೂವಂಡ ಬಿ.ದೇವಯ್ಯ
ಚೀಯಕಪೂವಂಡ ಬಿ.ದೇವಯ್ಯ   

ಮಡಿಕೇರಿ: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ನೀಡಲಾಗುವ 2022–23ನೇ ಮತ್ತು 2023–24ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ 6 ಮಂದಿ ಹಾಗೂ ಪುಸ್ತಕ ಪ್ರಶಸ್ತಿಗೆ ನಾಲ್ವರನ್ನು ಆಯ್ಕೆ ಮಾಡಲಾಗಿದೆ.

ವಾರ್ಷಿಕ ಪ್ರಶಸ್ತಿಯು ತಲಾ ₹ 50 ಸಾವಿರ ಮತ್ತು ಪುಸ್ತಕ ಪ್ರಶಸ್ತಿಯು ತಲಾ ₹ 25 ಸಾವಿರ ಒಳಗೊಂಡಿದೆ.

‘ಕೋಡಿಮಣಿಯಂಡ ತಮ್ಮುಣಿ ಬೋಪಯ್ಯ (ಕೊಡವ ಸಂಸ್ಕೃತಿ, ಪಾಟ್-ಪಡಿಪು ಕ್ಷೇತ್ರ), ಕಾಟಿಮಡ ಜಿಮ್ಮಿ ಅಣ್ಣಯ್ಯ (ಕೊಡವ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರ), ಚೇನಂಡ ರಘು ಉತ್ತಪ್ಪ (ಕೊಡವ ಜಾನಪದ ಕ್ಷೇತ್ರ), ಕೈಬುಲಿರ ಪಾರ್ವತಿ ಬೋಪಯ್ಯ (ಸಮಾಜ ಸೇವಾ ಕ್ಷೇತ್ರ), ಚೀಯಕಪೂವಂಡ ಬಿ. ದೇವಯ್ಯ (ಕೊಡವ ಆಟ್-ಪಾಟ್, ಸಂಸ್ಕೃತಿ ಕ್ಷೇತ್ರ), ಹೀರಕುಟ್ಟಡ ಟಸ್ಸಿ ಸದನ್ (ಜನ ಸೇವಾ ಕ್ಷೇತ್ರ) ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ’ ಎಂದು ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ಮಚ್ಚಮಡ ಲಾಲ ಕುಟ್ಟಪ್ಪ ಅವರ ‘ಮೂಪಾಜೆ ನಿಗಂಟ್’, ಐಚಂಡ ರಶ್ಮಿ ಮೇದಪ್ಪ ಅವರ ‘ಸಾಂಸ್ಕೃತಿರ ಪಿಞ್ಞ ಧಾರ್ಮಿಕ ಹಿನ್ನಲೆಲ್ ಕೊಡವಡ ಐನ್‌ಮನೆ ಅಧ್ಯಯನ ಗ್ರಂಥ ಪುಸ್ತಕ, ಕೊಟ್ಟ್ಕತ್ತಿರ ಪ್ರಕಾಶ್ ಕಾರ್ಯಪ್ಪ ಅವರ ‘ನಾಡ ಕೊಡಗ್ (ಕಾದಂಬರಿ)’ ಹಾಗೂ ಚೊಟ್ಟೆಯಂಡ ಲಲಿತ ಕಾರ್ಯಪ್ಪ-‘ಅಗ್ಗೇನ’ ಎಂಬ ಪುಸ್ತಕಕ್ಕೆ ಪ್ರಶಸ್ತಿ ನೀಡಲಾಗುವುದು’ ಎಂದು ಹೇಳಿದರು.

‘ಮಾರ್ಚ್ 29 ಹಾಗೂ 30ರಂದು ಅಮ್ಮತ್ತಿಯ ಕೊಡವ ಸಮಾಜದಲ್ಲಿ ‘ಕೊಡವ ಬಲ್ಯನಮ್ಮೆ’ಯನ್ನು ಆಯೋಜಿಸಿದ್ದು, 9 ಪುಸ್ತಕಗಳ ಬಿಡುಗಡೆ, ವಿಚಾರಗೋಷ್ಠಿ, ಕವಿಗೋಷ್ಠಿ ನಡೆಯಲಿದೆ. 30ರಂದು ಬೆಳಿಗ್ಗೆ 11ಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್.ತಂಗಡಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಕೈಬುಲಿರ ಪಾರ್ವತಿ ಬೋಪಯ್ಯ
ಚೇನಂಡ ರಘು ಉತ್ತಪ್ಪ
ಕಾಟಿಮಡ ಜಿಮ್ಮಿ ಅಣ್ಣಯ್ಯ
ಹೀರಕುಟ್ಟಡ ಟಸ್ಸಿ ಸದನ್
ಕೋಡಿಮಣಿಯಂಡ ತಮ್ಮುಣಿ ಬೋಪಯ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.