ADVERTISEMENT

ಮಡಿಕೇರಿ ದಸರಾ ಗಲಾಟೆ | ಡಿವೈಎಸ್ಪಿಗೆ ಗಂಭೀರ ಗಾಯ, ಆರೋಪಿ ಬಂಧನ: ಎಸ್.ಪಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 7:11 IST
Last Updated 3 ಅಕ್ಟೋಬರ್ 2025, 7:11 IST
<div class="paragraphs"><p>ಕೆ.ರಾಮರಾಜನ್,&nbsp;ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ</p></div>

ಕೆ.ರಾಮರಾಜನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

   

ಮಡಿಕೇರಿ: ಮಡಿಕೇರಿ ದಸರಾ ದಶಮಂಟಪಗಳ ಬಹುಮಾನ ವಿತರಣಾ ಸಮಾರಂಭದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದ ಗಲಾಟೆಯಲ್ಲಿ ಡಿವೈಎಸ್ಪಿ ಸೂರಜ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಆರೋಪಿ ಯಕ್ಷಿತ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದರು.

ದಶಮಂಟಪಗಳ ಪ್ರಶಸ್ತಿ ವಿತರಣೆ ವೇಳೆ ಪ್ರತೀ ವರ್ಷ ಗೊಂದಲ ಇರುತ್ತದೆ. ಅದರಂತೆ ಈ ಬಾರಿಯೂ ವೇದಿಕೆಯ ಮೇಲೆ ಗೊಂದಲ ಉಂಟಾಗಿತ್ತು.

ADVERTISEMENT

ಆ ವೇಳೆ ಡಿವೈಎಸ್​​​ಪಿ ಸೂರಜ್ ಮತ್ತು ಸಿಬ್ಬಂದಿ ವೇದಿಕೆಗೆ ಹೋಗಿದ್ದರು.ಪರಿಸ್ಥಿತಿ ತಿಳಿಗೊಳಿಸುವಾಗ ಯಕ್ಷಿತ್ ಎನ್ನುವ ವ್ಯಕ್ತಿ ಮದ್ಯ ಸೇವಿಸಿ ಗಲಾಟೆ ಮಾಡಿದ. ಆತನನ್ನು ಡಿವೈಎಸ್​​​ಪಿಯವರು ವೇದಿಕೆಯಿಂದ ಕೆಳಗೆ ಕರೆತರಲು ಮುಂದಾದರು

ಆತ ಪ್ರತಿರೋಧ ಒಡ್ಡಿದಾಗ ಡಿವೈಎಸ್​​ಪಿ ಹಾಗೂ ಸಿಬ್ಬಂದಿ ಕೆಳಗೆ ಬಿದ್ದಿದ್ದಾರೆ.ಪರಿಣಾಮ ಡಿವೈಎಸ್​​ಪಿ ಅವರಿಗೆ ತಲೆ ಹಾಗೂ ಕಾಲಿನ ಭಾಗಕ್ಕೆ ಗಾಯವಾಗಿದೆ

ಘಟನೆಗೆ ಸಂಬಂಧಿಸಿದಂತೆ ಯಕ್ಷಿತ್ ಎನ್ನುವ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.