ADVERTISEMENT

ಗಣೇಶ ವಿಸರ್ಜನೆ: ಮಡಿಕೇರಿಯಲ್ಲಿ ಅದ್ದೂರಿ ಶೋಭಾಯಾತ್ರೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 17:39 IST
Last Updated 12 ಸೆಪ್ಟೆಂಬರ್ 2025, 17:39 IST
   

ಮಡಿಕೇರಿ: ನಗರದ ಕೆಎಸ್‌ಆರ್‌ಟಿಸಿ ಬಸ್‌ ಡಿಪೊ ಬಳಿಯ ಶಾಂತಿನಿಕೇತನ ಬಡಾವಣೆಯಲ್ಲಿ ಶಾಂತಿನಿಕೇತನ ಯುವಕ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗೌರಿ, ಗಣೇಶ ಮೂರ್ತಿಗಳ ವಿಸರ್ಜನೋತ್ಸವ ಶನಿವಾರ ರಾತ್ರಿ ವೈಭವೋಪೇತವಾಗಿ ಜರುಗಿತು.

ಪಡುವಣದಲ್ಲಿ ಸೂರ್ಯ ಅಸ್ತಮಿಸುತ್ತಿದ್ದಂತೆ ಆರಂಭವಾದ ಭವ್ಯ ಶೋಭಾಯಾತ್ರೆಗೆ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮ ಸಾಕ್ಷಿಯಾಯಿತು. ಚಲನವಲನಗಳನ್ನು ಒಳಗೊಂಡ ಅದ್ದೂರಿ ಮಂಟಪ ಸೂಜಿಗಲ್ಲಿನಂತೆ ಸೆಳೆಯಿತು.

‘ಲೋಕಕಲ್ಯಾಣಕ್ಕಾಗಿ ಮಹಾಗಣಪತಿಯಿಂದ ದೈತ್ಯ ಶತಮಹಿಷಿಯ ಸಂಹಾರ’ ಕಥಾಹಂದರವನ್ನು ಮಂಟಪದಲ್ಲಿ ಪ್ರದರ್ಶಿಸಲಾಯಿತು. ಪೌರಾಣಿಕ ಹಿನ್ನೆಲೆಯ ಈ ಪ್ರದರ್ಶನವು ಸೂಜಿಗಲ್ಲಿನಂತೆ ಸೆಳೆಯಿತು.

ADVERTISEMENT

ಶಾಂತಿನಿಕೇತನ ಬಡಾವಣೆ, ಡಿಪೊ ಬಳಿ, ಜನರಲ್ ತಿಮಯ್ಯ ವೃತ್ತ, ನಗರ ಪೊಲೀಸ್ ಠಾಣೆ ಮುಂಭಾಗ, ಹಳೆ ಖಾಸಗಿ ಬಸ್‌ನಿಲ್ದಾಣ, ಇಂದಿರಾಗಾಂಧಿ ವೃತ್ತ (ಚೌಕಿ), ಚೌಡೇಶ್ವರಿ ದೇವಾಲಯ ಬಳಿ ಹೀಗೆ ಅನೇಕ ಕಡೆ ಪ್ರದರ್ಶನಗಳು ನಡೆದವು.

ವಿವಿಧ ಹಾಡುಗಳಿಗೆ ಯುವಜನರು ಕುಣಿದು ಕುಪ್ಪಳಿಸಿದರು. ಕೇಸರಿ ಧ್ವಜವನಿಡಿದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಹೆಜ್ಜೆ ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.