ADVERTISEMENT

ಮಡಿಕೇರಿ ನಗರಸಭೆ ಚುನಾವಣೆ: ಕೋವಿಡ್ ನಡುವೆಯೂ ಮತಗಟ್ಟೆಯತ್ತ ಮತದಾರರು

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2021, 5:15 IST
Last Updated 27 ಏಪ್ರಿಲ್ 2021, 5:15 IST
ಮಡಿಕೇರಿ ನಗರಸಭೆಯ‌ 23 ವಾರ್ಡ್‌ಗಳಿಗೆ ಮಂಗಳವಾರ ಬೆಳಿಗ್ಗೆಯಿಂದಲೇ ಮತದಾನ ನಡೆಯುತ್ತಿದೆ
ಮಡಿಕೇರಿ ನಗರಸಭೆಯ‌ 23 ವಾರ್ಡ್‌ಗಳಿಗೆ ಮಂಗಳವಾರ ಬೆಳಿಗ್ಗೆಯಿಂದಲೇ ಮತದಾನ ನಡೆಯುತ್ತಿದೆ   

ಮಡಿಕೇರಿ: ಮಡಿಕೇರಿ ನಗರಸಭೆಯ‌ 23 ವಾರ್ಡ್‌ಗಳಿಗೆ ಮಂಗಳವಾರ ಬೆಳಿಗ್ಗೆಯಿಂದಲೇ ಮತದಾನ ನಡೆಯುತ್ತಿದೆ. ಕೋವಿಡ್ ಆತಂಕದ ನಡುವೆ ನಿಧಾನವಾಗಿ ಮತಗಟ್ಟೆಯತ್ತ ಮತದಾರರು ಬರುತ್ತಿದ್ದಾರೆ. ಎಲ್ಲ ಮತಗಟ್ಟೆಯಲ್ಲೂ ಕೋವಿಡ್ ಮಾರ್ಗಸೂಚಿ ಪಾಲಿಸಿ ಮತದಾನಕ್ಕೆ ಅವಕಾಶ ಮಾಡಿಕೊಳ್ಳಲಾಗಿದೆ.

ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 23 ವಾರ್ಡ್‌ಗಳಿದ್ದು, 27 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಒಟ್ಟು 26,887 ಮತದಾರರಿದ್ದಾರೆ ಎಂದು ತಹಶಿಲ್ದಾರ್ ಮಹೇಶ್ ಅವರು ತಿಳಿಸಿದ್ದಾರೆ.

27 ಮತಗಟ್ಟೆಗಳಲ್ಲಿ 6 ಸೂಕ್ಷ್ಮ, 3 ಅತಿಸೂಕ್ಷ್ಮ ಮತ್ತು 18 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. 108 ಮಂದಿ ಕಣದಲ್ಲಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.